Wednesday, 1 January 2025
ಕೊಡಗಿನ ಅಪರೂಪದ ರುದ್ರಾಕ್ಷಿ
ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ಬೆಳೆಸಿದ
ಕೊಡಗಿನ ಅಪರೂಪದ ರುದ್ರಾಕ್ಷಿ
ಚೆಟ್ಟಳ್ಳಿ: ಶಿವನ ಕೊರಳಲ್ಲಿರುವ ರುದ್ರಾಕ್ಷಿಮಣಿಗಳು ಯಾರಿಗೆ ತಾನೆ ತಿಳಿಯದು. ದೈವಸ್ವರೂಪವೆಂದು ಆರಾಧಿಸುವ ಭಕ್ತರು ರುದ್ರಾಕ್ಷಿಯನ್ನು ಭಕ್ತಿ ಪೂರಕವಾಗಿ ಧರಿಸಿ ಪೂಜಿಸುವ ಸಂಪ್ರದಯವಿದೆ. ಇಂತಹ ವಿಶೇಷತರವಾದ ಅಪರೂಪದ ರುದ್ರಾಕ್ಷಿ ಮರವನ್ನು ಮಡಿಕೇರಿ ಸಮೀಪದ ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ತನ್ನ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿ ಕಾಯಿಯನ್ನು ಸಂಗ್ರಹಿಸುತ್ತಿದ್ದಾರೆ.
ಹಿಮಾಚ್ಚಾದಿತ ಪರ್ವತ ಶ್ರೇಣಿಗಳಲ್ಲಿ, ನೇಪಾಳದಲ್ಲಿ ಕಂಡುಬರುವ ರುದ್ರಾಕ್ಷಿಯನ್ನು ಕೊಡಗಿನ ವಾತಾವರಣದಲ್ಲಿ ಬೆಳೆಯಲಾಗು ತಿದೆಂದರೆ ಆಶ್ಚರ್ಯವಾಗ ಬಹುದು..!!!
ಭಾರತದ ಸಂಬಾರ ಮಂಡಳಿಯಲ್ಲಿ ಸೇವೆ ಸಲ್ಲಿಸಿದಂತ ನಿವ್ರತ್ತ ಅಧಿಕಾರಿ ಗಿರೀಶ್ ಕುಮಾರ್‌ರವರು ಸುಮಾರು ೧೪ವರ್ಷಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಸೇವೆಯಲ್ಲಿದಾಗ ಅಲ್ಲಿ ಬೆಳೆಯಲಾಗುತಿದ್ದ ರುದ್ರಾಕ್ಷಿಯ ಗಿಡವನ್ನು ತನ್ನ ಉತ್ತರ ಕೊಡಗಿನ ಚೆಟ್ಟಳ್ಳಿಯ ಮನೆ ಮುಂದಿನ ಕಾಫಿತೋಟದ ಬದಿಯಲ್ಲಿ ನೆಟ್ಟು ಪೋಷಿಸ ತೊಡಗಿದ್ದರು. ನೋಡುನೋಡುತಿದ್ದಂತೆ ಬೆಳೆದು ಸುಮಾರು ೬ವರ್ಷಗಳಲ್ಲಿ ಹೂವಾಗಿ ಕಾಯಾಗತೊಡಗಿತ್ತು. ವರ್ಷದ ಜೂನ್, ಜುಲೈನಲ್ಲಿ ಮೊದಲಫಸಲು ನವೆಂಬರ್ ಡಿಸಂರ‍್ನಲ್ಲಿ ಎರಡನೇ ಫಸಲಾತತೊಡಗಿತ್ತು. ೧೫ವರ್ಷಗಳಲ್ಲಿ ಸುಮಾರು ೩೫ರಿಂದ ೪೦ ಅಡಿ ಎತ್ತರದ ಹೆಮ್ಮರವಾಗಿ ಕಪ್ಪುಮಿಶ್ರಿತ ದುಂಡಗಿನ ಸಣ್ಣಸಣ್ಣ ಕಾಯಿಗಳು ಬೆಳೆದು ಬೀಳತೊಡಗಿದವು. ಅವನೆಲ್ಲ ಹೆಕ್ಕಿತಂದು ನೀರಿನಲ್ಲಿಟ್ಟು ಸಿಪ್ಪೆತೆಗೆದು ತೊಳೆದು ರುದ್ರಾಕ್ಷಿ ಕಾಯಿಗಳನ್ನು ಸಂಗ್ರಹಿಸುತಿದ್ದಾರೆ. ಪಂಚಮುಖಿಯ ಕಾಯಿಗಳೇ ಹೆಚ್ಚಾಗಿದ್ದು ೮ರಿಂದ೧೨ರಡು ಮುಖದ ಕಾಯಿ(ಮಣಿ)ಗಳು ಅಪರೂಪವಾಗಿ ದೊರೆತಿವೆ.ವಿಶೇಷ ಪಟ್ಟ ಗೌರಿಶಂಕರ ವೆಂಬ ಜೋಡಿ ರುದ್ರಾಕ್ಷಿ ಕಾಯಿ ಒಂದು ದೊರೆತಿದ್ದು ದೇವರ ನೆಲೆಯಲ್ಲಿಟ್ಟು ಪೂಜಿಸಲಾಗುತಿದೆ.
ಏಕಮುಖ, ದ್ವಿಮುಖ, ತ್ರಿಮುಖ, ಚುರ್ತುರ್ ಮುಖಿ, ಪಂಚಮುಖಿ, ಷಷ್ಠತಮುಖಿ, ಸಪ್ತಮುಖಿ, ಅಷ್ಟಮುಖಿ, ನವಮುಖಿ, ದಶಮುಖಿ, ಏಕದಶಮುಖಿ, ದ್ವಾಸಶಾಮುಖಿ, ತ್ರಯೋದಶಿಮುಖಿ, ಚರ್ತುಮುಖಿ ವಿಶೇಷಪಟ್ಟ ಹೆಸರಿನಕಾಯಿಯ ಗುಣಲಕ್ಷಣದ ಮೇರೆ ೧೫ರೂಪಾಯಿಯಿಂದ ಸಾವಿರಗಟ್ಟಲೆ ಬೆಲೆಬಾಳುವ ರುದ್ರಾಕ್ಷಿಗಳು ದಕ್ಷಿಣ ಭಾರತದಲ್ಲಿ ಅಪರೂಪ ಜೊತೆಗೆ ಫಸಲು ಬಿಡುವುದಂತೂ ಇನ್ನೂ ಅಪರೂಪ.
ಸಂಗ್ರಹಿಸಿದ ಶಿವನಿಗೆ ಪ್ರಿಯವಾದ ಈ ರುದ್ರಾಕ್ಷಿ ಕಾಯಿಗಳನ್ನು ಕೊಡಗಿನ ನಾನಾ ಶಿವಾದೇವಾಯಲಕ್ಕೆ, ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಶಿವಾರಾಧನ ಮಠಗಳಿಗೆ ಕಾಯಿ ನೀಡಿದ್ದು ಹಾಗು ಕೊಡಗಿನ ಕೆದಕಲ್ಲö್ನ ಭದ್ರಕಾಳಿ ದೇವಾಲಯಕ್ಕೆ ಇಗ್ಗುತಪ್ಪ ದೇವಾಲಯಕ್ಕೆ, ಮದೆನಾಡಿನ ಮದೆಮಹದೇಶ್ವರ ದೆವಾಲಯಕ್ಕೆ ಗಿಡಗಳನ್ನು ನೀಡಲಾಗಿದೆಂದು ಅಯ್ಯಂಡ್ರ ಗಿರೀಶ್ ಹೇಳುತ್ತಾರೆ. ರುದ್ರಾಕ್ಷಿ ಕಾಯಿಗಳನ್ನು ತಂದು ಮಣಿಗಳಾಗಿ ಪೋಣಿಸಿ ಮಾಲೆಯಾಗಿಸಿ ದೇವರ ನೆಲೆಯಲ್ಲಿಟ್ಟು ನಿತ್ಯದ ಜಪಕ್ಕೆ ಬಳಸಲಾಗುತಿದ್ದು ಕುಟುಂಬಕ್ಕೆ ಉತ್ತಮ ಫಲ ಜೊತೆಗೆ ಧರಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆಯೊAದಿಗೆ ಕುಟುಂಬದವರಲ್ಲರು ಲಾಕೆಟ್ ಮಾಡಿ ಧರಿಸಿದ್ದ ಬಗ್ಗೆ ಪತ್ನಿ ಹೇಳುತ್ತಾರೆ.
ಕ್ರಷಿಯ ಬಗ್ಗೆ ಆಸಕ್ತಿಹೊಂದಿರುವ ಗಿರೀಶ್‌ರವರು ತೋಟದಲ್ಲಿ ಮೂರು ರುದ್ರಾಕ್ಷಿ ಗಿಡಗಳನ್ನು ನೆಟ್ಟು ಪೋಶಿಸುತಿರುವ ಜೊತೆಗೆ ಜಾಯಿಕಾಯಿ, ಅಂಜುರ(ಫಿಗ್) ನಾನಾ ವಿಧದ ಸುಗಂಧ ದ್ರವ್ಯದ ಮರಗಳು,ಕಾಚಂಪುಳಿಯAತಹ ಹಲವು ಬಗೆಯ ಮರಗಳನ್ನು ನೆಟ್ಟಿದ್ದಾರೆ.
ರುದ್ರಾಕ್ಷಿ ಕಾಯಿಯಲ್ಲಿ ವಿಶೇಷ ಪಟ್ಟ ಔಷಧಿಯ ಗುಣ ಇರುವುದರಿಂದ ಬೋಂಬೆಯ ಮಹೇಶ್‌ಗೋಡ್ ಬೇಲ್ ಎಂಬವರು ಗಿರೀಶ್ ರವರನ್ನು ಸಂಪರ್ಕಿಸಿ ಕಾಯಿಗಳನ್ನು ಕಳುಸಿಕೊಡಬೇಕೆಂದು ಬೇಡಿಕೆ ಇಟ್ಟಮೇರೆಗೆ ಕಳುಸಿದ್ದಾರೆ. ಮನೆಯಲ್ಲಿ ಸಂಗ್ರಹಿಸಿಟ್ಟ ಕಾಯಿಗಳನ್ನು ಬಂಧನೆಟ್ಟರಿಷ್ಟರಿಗೆಲ್ಲ ನೀಡುತಿರುವ ಬಗ್ಗೆ ಹೇಳುತ್ತಾರೆ. ಹೆಚ್ಚಿನ ಮಹಿತಿಗಾಗಿ ೯೪೪೮೦೪೫೪೯೭ ಸಂಪರ್ಕಿಸ ಬಹುದು.
-ಪುತ್ತರಿರ ಕರುಣ್ ಕಾಳಯ್ಯ, ಪಪ್ಪುತಿಮ್ಮಯ್ಯ
Subscribe to:
Post Comments (Atom)
No comments:
Post a Comment