Sunday, 9 February 2025

*ಮಣ್ಣಿನ ಸಹಾಯವಿಲ್ಲದೆ ಬೆಳೆಯುವ ಹೈಡ್ರೋಫೋನಿಕ್ ಕೃಷಿ ವಿಧಾನ*

  


ಯಾವುದೇ ಕೃಷಿ ಮಾಡಲು ಮಣ್ಣೇ ಮುಖ್ಯ. 'ಮಣ್ಣಿಲ್ಲದೆ ಕೃಷಿ ಮಾಡಬಹುದೇ?' ಎಂಬ ಪ್ರಶ್ನೆಗೆ, 'ಹೌದು ಮಣ್ಣಿಲ್ಲದೆ ಕೃಷಿ ಮಾಡಲು ಸಾಧ್ಯ' ಎಂಬ ಉತ್ತರ ಈಗ ನಮ್ಮಲ್ಲಿದೆ. ಇತ್ತೀಚಿನ ದಿನಗಳಲ್ಲಿ ಹೈಡ್ರೋಫೋನಿಕ್ಸ್ ಎಂಬ ವಿನೂತನ ಕೃಷಿ ವಿಧಾನ ಚಾಲ್ತಿಯಲ್ಲಿದೆ. ಈ ಪದ್ಧತಿ ಕೃತಕ ಪರಿಸರದಲ್ಲಿ ನೀರು ಆಧರಿತ ಖನಿಜ ಪೋಷಕಾಂಶಗಳನ್ನು ಬಳಸಿಕೊಂಡು ಮಣ್ಣು ಇಲ್ಲದೆ ನೀರಿನ ಮೂಲಗಳಿಂದ ಸಸ್ಯಗಳನ್ನು ಬೆಳೆಸಬಹುದು. ಸಾಮಾನ್ಯವಾಗಿ ಕೆಲವು ತೋಟಗಾರಿಕಾ ಬೆಳೆಗಳು, ಸೊಪ್ಪು ತರಕಾರಿಗಳು, ಔಷಧಿಯ ಸಸ್ಯಗಳನ್ನು ಚೆನ್ನಾಗಿ ಬೆಳೆಸಬಹುದು. ಈಗ‌ ಈ ವಿಧಾನದಲ್ಲಿ ಪ್ರಾಣಿಗಳಿಗೆ ಮೇವುಗಳನ್ನು ಸಹ ಬೆಳೆಯುತ್ತಿದ್ದಾರೆ.


 *ಏನಿದು ಹೈಡ್ರೋಫೋನಿಕ್ ಕೃಷಿ ವಿಧಾನ?* 

          ಜಲ ಕೃಷಿ ಅಥವಾ ಹೈಡ್ರೋಫೋನಿಕ್ ಕೃಷಿ ಎನ್ನುವುದು ಒಂದು ತಂತ್ರಜ್ಞಾನ. ಹೈಡ್ರೋ ಎಂದರೆ ನೀರು, ಫೋನಸ್ ಎಂದರೆ ಕೆಲಸ ಮಾಡುವುದು ಎಂದರ್ಥ. ಒಟ್ಟಾರೆಯಾಗಿ, ಹೈಡ್ರೋಫೋನಿಕ್ಸ್ ಅಂದರೆ ಮಣ್ಣಿಲ್ಲದೆ ನೀರಿನಲ್ಲಿ ಕೃಷಿ ಮಾಡುವುದು ಎಂಬ ಅರ್ಥ ಕೊಡುತ್ತದೆ. ಸಸ್ಯಗಳಿಗೆ ಬೇಕಾದ ಎಲ್ಲಾ ಪೋಷಕಾಂಶವನ್ನು ನೀರಿಗೆ ಹಾಕಲಾಗುತ್ತದೆ. ಇದರಲ್ಲಿ ಬಳಸುವ ದ್ರಾವಣವನ್ನು ಅದರ ನಿರ್ದಿಷ್ಟ ಉಷ್ಣಾಂಶ ಹಾಗೂ phನ್ನು ಕಾಪಾಡಬೇಕು.

 *ವಿಧಗಳು:* 

ಜಲಕೃಷಿಯಲ್ಲಿ ಸಾಕಷ್ಟು ವಿಧಗಳಿವೆ. ಪ್ರತಿಯೊಂದು ವಿಧವು ವಿಭಿನ್ನ ಬೆಳೆ ಹಾಗೂ ಪರಿಸ್ಥಿತಿಗಳಿಗೆ ಸೂಕ್ತ ವಾಗುವಂತೆ ಬೆಳೆಸಲಾಗುತ್ತದೆ. 

 *1. Deep water culture:* ಇದರಲ್ಲಿ ಸಸ್ಯದ ಬೇರುಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುತ್ತದೆ. ಬೇರುಗಳು ಕೊಳೆಯಬಾರದೆಂದು ಆಮ್ಲಜನಕವನ್ನು ಕೃತಕವಾಗಿ ನೀಡಲಾಗುತ್ತದೆ.
ಲೆಟ್ಯುಸ್, ಪಾಲಕ್ ನಂತಹ ಸೊಪ್ಪು ತರಕಾರಿ, ಗಿಡಮೂಲಿಕೆಗಳನ್ನು ಈ ರೀತಿಯಲ್ಲಿ ಬೆಳೆಸಬಹುದು.

 *2. Nutrient film technique (NFT):* ಸಸ್ಯದ ಬೇರುಗಳನ್ನು  ಪೌಷ್ಟಿಕಾಂಶದ ದ್ರಾವಣದಲ್ಲಿ ಹರಿಬಿಡಲಾಗುತ್ತದೆ. ಇದರಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದ್ದು ಸಸ್ಯಗಳು ಇದರಿಂದ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳುತ್ತವೆ. ಸ್ಟ್ರಾಬೆರಿ, ಪಾಲಕ್, ಗಿಡ ಮೂಲಿಕೆಗಳನ್ನು ಬೆಳೆಯಬಹುದು.

 *3. Ebb and flow(Flood and drain):* ಈ ವಿಧಾನದಲ್ಲಿ ಟ್ರೇ ಅಥವಾ ಪ್ಲೇಟ್ ನಲ್ಲಿ ಸಸ್ಯವನ್ನು ಪೌಷ್ಟಿಕಾಂಶದ ದ್ರಾವಣದಲ್ಲಿ ಇಡಲಾಗುತ್ತದೆ. ನಿರ್ದಿಷ್ಟ ಸಮಯದವರೆಗೆ ಹಾಗೆ ಇಟ್ಟು ನೀರನ್ನು ಬಸಿಯಲಾಗುವುದು. ಟೊಮೇಟೊ,ಮೆಣಸಿನಕಾಯಿ,ಸೌತೆಕಾಯಿ ಈ ವಿಧಾನದಲ್ಲಿ ಬೆಳೆಸಬಹುದು. 

 *4. Drip system:* ಪೋಷಕಾಂಶದ ದ್ರಾವಣವನ್ನು ನಿಯಂತ್ರಿತ ವ್ಯವಸ್ಥೆಯನ್ನು ಬಳಸಿಕೊಂಡು ಬೇರುಗಳ ಮೇಲೆ ತೊಟ್ಟಿಕ್ಕಲಾಗುತ್ತದೆ.

 *5. Aeroponics:* ಸಸ್ಯದ ಬೇರುಗಳನ್ನು ಗಾಳಿಗೆ ನೇತಾಡಲು ಬಿಡುತ್ತಾರೆ. ಪೋಷಕಾಂಶಗಳ ದ್ರಾವಣವನ್ನು  ಸಿಂಪಡಿಸುವ ಮೂಲಕ ಬೇರುಗಳು ಪೋಷಕಾಂಶಗಳನ್ನು ಪಡೆಯುತ್ತವೆ.

 *6. Wick system:* ಈ ವಿಧಾನದಲ್ಲಿ ಸಣ್ಣ ದಾರವನ್ನು ಪೋಷಕಾಂಶಗಳ ದ್ರಾವಣಕ್ಕೆ ಹರಿಬಿಟ್ಟಾಗ ಇದು ಗಿಡಕ್ಕೆ ಬೇಕಾದಷ್ಟು ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ. 

 *ಜಲಕೃಷಿಯ ಪ್ರಯೋಜನಗಳು;* 

ಜಲ ಕೃಷಿಯಲ್ಲಿ ಸಸಿಗಳ ಅರ್ಧ ಬೇರುಗಳು ನೀರಿನಲ್ಲಿ ಮುಳುಗಿದ್ದು, ಅದೇ ನೀರಿಗೆ ಪೋಷಕಾಂಶಗಳನ್ನು ಹಾಕುತ್ತಾರೆ. ಬೇಕಾದಷ್ಟು ಮಾತ್ರ ಹೀರಿಕೊಂಡು ತುಂಬಾ ವೇಗವಾಗಿ ಬೆಳೆಯಲು ಆರಂಭಿಸುತ್ತದೆ. ಹಾಗಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭಗಳಿಸಲು ಸಾಧ್ಯವಿದೆ. 

ಜಲ ಕೃಷಿ ಅಂತ ಅಂದ ತಕ್ಷಣ ಹೆಚ್ಚು ನೀರಿನ ಅವಶ್ಯಕತೆ ಇದೆ ಅಂತ ಅಲ್ಲ. ಬೆಂಗಳೂರಿನಂತಹ ನಗರಗಳಲ್ಲಿ ಕೃಷಿ ಜಾಗ ಕಮ್ಮಿ ಇದ್ದಾಗ ತಮ್ಮ ಮನೆಯ ಟೆರೇಸ್ ಮೇಲೆ ಟ್ಯಾಂಕ್ ನೀರು ಬಳಸಿ ಕೃಷಿ ಮಾಡುವವರಿದ್ದಾರೆ. ಈ ಕೃಷಿ ವಿಧಾನದಲ್ಲಿ ನೀರಿನ ಖರ್ಚು ಕೂಡ ಕಡಿಮೆ ಇರುತ್ತದೆ. 

ಹೈಡ್ರೊಫೋನಿಕ್ಸ್ ಕ್ರಷಿಯಲ್ಲಿ ಮಣ್ಣಿನ ಬಳಕೆ ಇಲ್ಲದಿರುವುದರಿಂದ ಕಳೆ ಸಮಸ್ಯೆ ಇರುವುದಿಲ್ಲ. ಬೆಳೆ ಹಾಳು ಮಾಡುವ ಕೀಟಗಳ ಸಮಸ್ಯೆ ಕೂಡ ಇರೋದಿಲ್ಲ. ಹಾಗಾಗಿ, ಉತ್ತಮ ದರ್ಜೆಯ ಬೆಳೆಗಳು ಹೆಚ್ಚು ಇಳುವರಿಯೊಂದಿಗೆ ಸಿಗುತ್ತದೆ. 

ಹೈಡ್ರೋಫೋನಿಕ್ಸ್ ಕೃಷಿಯಲ್ಲಿ ಪಾಲಿಹೌಸ್‌ಗಳ ಬಳಕೆಯಿದ್ದು, ರೋಗಗಳಿಂದ ರಕ್ಷಣೆ ಸಿಗುತ್ತದೆ. ಜೊತೆಗೆ ಕೀಟನಾಶಕ ಬಳಸುವುದು ಕೂಡ ತಪ್ಪುತ್ತದೆ. 

ಜಲ ಕೃಷಿಯನ್ನು ಅತ್ಯಂತ ಕಡಿಮೆ ಜಾಗದಲ್ಲಿ ಮಾಡಿ ಅದಕ್ಕಿಂತ  ದುಪಟ್ಟು ಆದಾಯ ಗಳಿಸಬಹುದು.
 
ಈ ಕೃಷಿ ವಿಧಾನದಲ್ಲಿ ಬಿಸಿಲಿನಲ್ಲಿ ಇಳಿದು ಇಡೀ ದಿನ ಕೆಲಸ ಮಾಡಬೇಕೆಂದಿಲ್ಲ. ಜೊತೆಗೆ ಜಾಸ್ತಿ ಕೂಲಿಗಳ ಅಥವಾ ಜನರ ಅವಶ್ಯಕತೆ ಕೂಡ ಇಲ್ಲ.

ಸೊಪ್ಪು, ತರಕಾರಿಗಳು, ಗಿಡಮೂಲಿಕೆಗಳು ಹಾಗೂ ಕೆಲವೊಂದು ಸಣ್ಣ ಬೇರಿನ ಸಸ್ಯಗಳನ್ನು ಹೈಡ್ರೋಫೋನಿಕ್ ವಿಧಾನದಲ್ಲಿ ಬೆಳೆದರೆ ಹೆಚ್ಚು ಲಾಭಗಳಿಸಬಹುದು.

 *ಹೈಡ್ರೋಫಾನಿಕ್ಸ್  ಕೃಷಿಯ ಸಮಸ್ಯೆಗಳು;* 

ಹೆಚ್ಚು ಆರಂಭಿಕ ಖರ್ಚು: ಹೈಡ್ರೋಫೋನಿಕ್ಸ್ ಕೃಷಿಯ ಸ್ಥಾವರವನ್ನು ಸ್ಥಾಪಿಸಲು ಅದಕ್ಕೆ ಬೇಕಾದ ಉಪಕರಣಗಳು ಮತ್ತು ತಂತ್ರಜ್ಞಾನಕ್ಕೆ ಹೆಚ್ಚು ಖರ್ಚು ತಗಲುತ್ತದೆ. ಜೊತೆಗೆ, ಪಾಲಿಹೌಸ್ ಕೂಡ ಸ್ಥಾಪಿಸಬೇಕಾಗುತ್ತದೆ. ಅದಕ್ಕೂ ಹೆಚ್ಚು ಖರ್ಚಿದೆ. 

ರೈತರ ಶ್ರದ್ಧೆ, ಸಮಯ ತುಂಬಾ ಅವಶ್ಯ. ಸರಿಯಾದ ಸಮಯದಲ್ಲಿ ಸರಿಯಾದ ಪೋಷಕಾಂಶಗಳನ್ನು ನೀಡಬೇಕು. ಹಾಗಾಗಿ, ನಿರಂತರ ಮೇಲ್ವಿಚಾರಣೆ ಅಗತ್ಯ.

ಹೈಡ್ರೋಫೋನಿಕ್ಸ್‌ನಲ್ಲಿ ಗಿಡಗಳು ಕೃತಕ ವಾತಾವರಣದಲ್ಲಿ ಬೆಳೆಯುವುದರಿಂದ ಅದನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕಾಗುತ್ತದೆ.  

ನಿರಂತರ ವಿದ್ಯುತ್ ಸರಬರಾಜು ಬೇಕು. ಸಸ್ಯಗಳಿಗೆ ನಿರಂತರ ಪೋಷಕಾಂಶಗಳ ಸರಬರಾಜು ಹಾಗೂ ಕಳೆ ವಿಲೇವಾರಿ ಮಾಡಬೇಕಾಗಿರುವುದರಿಂದ ನಿರಂತರ ವಿದ್ಯುತ್ ಅವಶ್ಯಕತೆ ಇದೆ. 

ಇದು ನಿರ್ದಿಷ್ಟ ಬೆಳೆಗಳಿಗೆ ಸೀಮಿತವಾಗಿದೆ. ಸೊಪ್ಪು, ತರಕಾರಿ, ಗಿಡ ಮೂಲಿಕೆಗಳನ್ನು ಚೆನ್ನಾಗಿ ಬೆಳೆಯಲಾಗುತ್ತದೆ. ಆದರೆ, ಆಳವಾಗಿ ಬೇರೂರಬಲ್ಲ ಸಸ್ಯಗಳನ್ನು ಬೆಳೆಯಲು ಸಾಧ್ಯವಿಲ್ಲ.

ನೀರಿನಿಂದ ಹರಡುವ ರೋಗಗಳ ಅಪಾಯವಿರುತ್ತದೆ.

 ಜನಸಂಖ್ಯೆ ಹೆಚ್ಚಿದಂತೆ ಹಾಗೂ ಕೃಷಿಯೋಗ್ಯ ಭೂಮಿ ಕಡಿಮೆ ಇದ್ದಾಗ, ಹೈಡ್ರೋಪೋನಿಕ್ ಕೃಷಿಯು ಆಹಾರ ಭದ್ರತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.





ಡಾ|| ಗ್ರೀಷ್ಮಾ ಗೌಡ ಆರ್ನೋಜಿ BNYS,Msc(Clinical Nutrition and dietetics)
ವೈದ್ಯರು 
ಸಂಪೂರ್ಣ ಪಾಲಿಕ್ಲಿನಿಕ್ ಕಡಬ

Wednesday, 15 January 2025

ರಾಷ್ಟೀಯ ರೈತ ದಿನಾಚರಣೆ

ರಾಷ್ಟೀಯ ರೈತ ದಿನಾಚರಣೆ 
 ಡಿಸೆಂಬರ್-23 


 ಬರಹ: ಕೂಡಂಡ ರವಿ, ಹೊದ್ದೂರು. 

 ಅಂದಿನ ಕಾಲದ ಪ್ರಧಾನ ರೈತರ ನಾಯಕರಾಗಿದ್ದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥ ಆಚರಿಸಲಾಗುತ್ತಿದೆ. ಅವರ ಹುಟ್ಟಿದ ದಿನವಾದ ಡಿಸೆಂಬರ್ 23 ಅನ್ನು ಭಾರತದಲ್ಲಿ ರಾಷ್ಟಿçÃಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಾಸ್ ಎಂದು ಸ್ಮರಿಸಲಾಗುತ್ತದೆ. ಸ್ವಾತಂತ್ರ‍್ಯ ಪೂರ್ವ ಭಾರತದಲ್ಲಿ ಸಕ್ರಿಯ ರಾಜಕಾರಣಿಯಾಗಿದ್ದ ಅರವರು 1938 ರಲ್ಲಿ ಅಂದಿನ ಯುನೈಟೆಡ್ ಪ್ರಾಂತ್ಯದ ವಿಧಾನಸಭೆಯಲ್ಲಿ ಕೃಷಿ ಉತ್ಪಾದನಾ ಮಾರುಕಟ್ಟೆ ಮಸೂದೆಯನ್ನು ಪರಿಚಯಿಸಿದ ಕೀರ್ತಿಗೆ ಭಾಜರಾಗಿದ್ದಾರೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಯಾಂತ್ರಿಕ ವ್ಯವಸ್ಥೆಯನ್ನು ಹೊಂದಿರುವ ಭಾರತೀಯರ ಮೊದಲ ಶಾಸಕಾಂಗ ಕ್ರಮವಾದ್ದರಿಂದ ಆ ಮಸೂದೆ ಮಹತ್ವದ್ದಾಗಿತ್ತು. ವ್ಯಾಪಾರಿಗಳ ಒತ್ತಡ ತಂತ್ರಗಳಿAದ ರೈತರನ್ನು ರಕ್ಷಿಸುವುದು ಇದರ ಉದ್ದೇಶವಾಗಿತ್ತು. ಈ ಮಸೂದೆಯನ್ನು ಸ್ವಾತಂತ್ರ‍್ಯದ ಮೊದಲು ಕೆಲವು ಪ್ರಾಂತೀಯ ಸರ್ಕಾರಗಳು ಅಂಗೀಕರಿಸಿದವು. ಇವುಗಳಲ್ಲಿ ಪಂಜಾಬ್ ಮೊಟ್ಟ ಮೊದಲನೆಯದು. ಅವರ ಗೌರವಾರ್ಥವಾಗಿ, ಡಿಸೆಂಬರ್ 23 ರಂದು ಬರುವ ಅವರ ಜನ್ಮದಿನವನ್ನು ರೈತರ ದಿನ ಅಥವಾ ಕಿಸಾನ್ ದಿವಾಸ್ ಆಚರಿಸಲು ದಿನವಾಗಿ ಆಯ್ಕೆ ಮಾಡಲಾಯಿತು. ಸಿಂಗ್ 1902ರಲ್ಲಿ ಮೀರತ್‌ನಲ್ಲಿ ಜನಿಸಿದರು. ಅವರು ರೈತ ಕುಟುಂಬದಿAದ ಬಂದವರು ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಷ್ಟಿç ನೀಡಿದ 'ಜೈ ಜವಾನ್, ಜೈ ಕಿಸಾನ್' ಎಂಬ ಘೋಷಣೆಯನ್ನು ನಂಬಿದ್ದರು. ಭಾರತದ ರೈತರನ್ನು ಗೌರವಿಸಲು ಮತ್ತು ರಾಷ್ಟçದ ಐದನೇ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ರಾಷ್ಟಿçÃಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಾಸ್ ಅನ್ನು ಡಿಸೆಂಬರ್ 23ರಂದು ದೇಶಾದ್ಯಂತ ಆಚರಿಸಲಾಗುತ್ತದೆ. 2001ರಲ್ಲಿ, ಚೌಧರಿ ಚರಣ್ ಸಿಂಗ್ ಅವರ ಜನ್ಮ ದಿನಾಚರಣೆಯನ್ನು ಕಿಸಾನ್ ದಿವಾಸ್ ಎಂದು ಆಚರಿಸುವ ಮೂಲಕ ಕೃಷಿ ಕ್ಷೇತ್ರ ಮತ್ತು ರೈತರ ಕಲ್ಯಾಣಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಲು ಸರ್ಕಾರ ನಿರ್ಧರಿಸಿತು. 1979 ಮತ್ತು 1980 ರ ನಡುವೆ ಸಂಕ್ಷಿಪ್ತವಾಗಿ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದ ಚೌಧರಿ ಚರಣ್ ಸಿಂಗ್ ಅವರನ್ನು ದೇಶದ ಅತ್ಯಂತ ಪ್ರಸಿದ್ಧ ರೈತ ಮುಖಂಡರಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ರೈತರ ಕಲ್ಯಾಣ ಮತ್ತು ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಅವರು ತಮ್ಮ ಪ್ರವರ್ತಕ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದರು. ಭಾರತೀಯ ರೈತ ಎದುರಿಸುತ್ತಿರುವ ಹೋರಾಟಗಳಿಗೆ ಚರಣ್ ಸಿಂಗ್ ಹೊಸದೇನೂ ಆಗಿರಲ್ಲಿಲ್ಲ. ಅವರು ಡಿಸೆಂಬರ್ 23, 1902 ರಂದು ಉತ್ತರ ಪ್ರದೇಶದ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದರು. ಮಹಾತ್ಮ ಗಾಂಧಿಯವರ ಬೋಧನೆಗಳಿಂದ ಹೆಚ್ಚು ಪ್ರಭಾವಿತರಾದ ಅವರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಚರಣ್ ಸಿಂಗ್ ಭಾರತದ ಅತಿದೊಡ್ಡ ಕೃಷಿ ರಾಜ್ಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡು ಬಾರಿ ಸೇವೆ ಸಲ್ಲಿಸಿದರು, ಅಲ್ಲಿ ಅವರು ಭೂ ಸುಧಾರಣೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 1939ರ ಭೂ ಬಳಕೆ ಮಸೂದೆ ಮತ್ತು 1939 ರಲ್ಲಿ ಸಾಲ ವಿಮೋಚನೆ ಮಸೂದೆ ಸೇರಿದಂತೆ ಹಲವಾರು ಪ್ರಮುಖ ರೈತ-ಫಾರ್ವರ್ಡ್ ಮಸೂದೆಗಳ ಜಾರಿಯ ಹಿಂದೆ ಇದ್ದರು. 1952 ರಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವಾಗ, ಜಮೀನ್ದಾರಿ ವ್ಯವಸ್ಥೆಯನ್ನು ರದ್ದುಗೊಳಿಸುವ ಪ್ರಯತ್ನದಲ್ಲಿ ಯುಪಿಯನ್ನು ಮುನ್ನಡೆಸಿದರು. ವಾಸ್ತವವಾಗಿ, ಅವರು ಯುಪಿ ಜಮೀನ್ದಾರಿ ಮತ್ತು ಭೂ ಸುಧಾರಣಾ ಮಸೂದೆಯನ್ನು ಸ್ವತಃ ರಚಿಸಿದರು. ಡಿಸೆಂಬರ್ 23, 1978 ರಂದು, ಅವರು ಕಿಸಾನ್ ಟ್ರಸ್ಟ್ ಅನ್ನು ಸ್ಥಾಪಿಸಿದರು - ರಾಜಕೀಯೇತರ, ಲಾಭೋದ್ದೇಶವಿಲ್ಲದ ಸಂಸ್ಥೆ - ಅನ್ಯಾಯದ ವಿರುದ್ಧ ಭಾರತದ ಗ್ರಾಮೀಣ ಜನತೆಗೆ ಶಿಕ್ಷಣ ನೀಡುವ ಮತ್ತು ಅವರಲ್ಲಿ ಒಗ್ಗಟ್ಟನ್ನು ಬೆಳೆಸುವ ಉದ್ದೇಶದಿಂದ ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಪ್ರಧಾನಿಯಾಗಿ ಭಾರತೀಯ ರೈತರ ಕಲ್ಯಾಣಕ್ಕಾಗಿ ಶ್ರಮಿಸಿದರು. ಇದು ಮಾತ್ರವಲ್ಲದೆ ಅವರು ರೈತರಿಗಾಗಿ ಹಲವಾರು ಯೋಜನೆಗಳನ್ನು ಪರಿಚಯಿಸಿದರು. ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ? 
 • ರೈತರ ಅನುಕೂಲಕ್ಕಾಗಿ ಸರ್ಕಾರ ಹೊಸ ನೀತಿಗಳನ್ನು ಪ್ರಕಟಿಸುತ್ತದೆ. 
 • ಕಿಸಾನ್ ಸೆಮಿನಾರ್‌ಗಳನ್ನು ವಿಭಾಗೀಯ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಆಯೋಜಿಸಲಾಗಿದೆ. 
 • ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ಇಂತಹ ಕಾರ್ಯಗಳಲ್ಲಿ ರೈತರಿಗೆ ಹೊಸ ದತ್ತಾಂಶವನ್ನು ತಿಳಿಸುತ್ತಾರೆ.
 • ರೈತರ ವಿಚಾರ ಸಂಕಿರಣಗಳನ್ನು ವಿವಿಧ ಕೃಷಿ ವಿಜ್ಞಾನ ಸ್ಥಳಗಳು ಮತ್ತು ಕೃಷಿ ಜ್ಞಾನ ಸ್ಥಳಗಳಲ್ಲಿ ನಡೆಸಲಾಗುತ್ತದೆ.
 • ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯ ಹಲವಾರು ಅಂಶಗಳ ಕುರಿತು ವಿಚಾರ ಸಂಕಿರಣಗಳು, ಉತ್ಸವಗಳು ಮತ್ತು ಪ್ರದರ್ಶನಗಳನ್ನು ನಡೆಸುತ್ತದೆ. ಕೃಷಿ ವಿಮಾ ಯೋಜನೆಗಳ ಬಗ್ಗೆ ರೈತರಿಗೆ ಶಿಕ್ಷಣ: ರೈತರ ಆರ್ಥಿಕ ಸ್ಥಿತಿಯನ್ನು ಉನ್ನತೀಕರಿಸಲು ಭಾರತ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ. ಸಾಮಾನ್ಯವಾಗಿ, ರೈತರ ಪಾತ್ರ ಮತ್ತು ಆರ್ಥಿಕತೆಗೆ ಅವರು ನೀಡುವ ಕೊಡುಗೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ದೇಶಾದ್ಯಂತ ಜಾಗೃತಿ ಅಭಿಯಾನಗಳನ್ನು ಆಯೋಜಿಸಲಾಗಿದೆ. ವಿದೇಶಗಳಲ್ಲಿ ರೈತರ ದಿನಾಚರಣೆ ಘಾನಾದಲ್ಲಿ : ಘಾನಾದಲ್ಲಿ ರಾಷ್ಟಿçÃಯ ರೈತ ದಿನಾಚರಣೆ ರೈತರು ಮತ್ತು ಮೀನುಗಾರರ ವಾರ್ಷಿಕ ಆಚರಣೆಯು ನಡೆಯುತ್ತದೆ. ಇದನ್ನು ಡಿಸೆಂಬರ್ ಮಾಹೆಯ ಮೊದಲ ಶುಕ್ರವಾರ ಆಚರಿಸಲಾಗುತ್ತದೆ. ರೈತರ ದಿನದಂದು, ಆಹಾರ ಮತ್ತು ಕೃಷಿ ಸಚಿವಾಲಯ (ಘಾನಾ) ಅರ್ಹ ರೈತರು ಮತ್ತು ಮೀನುಗಾರರಿಗೆ ಅವರ ಅಭ್ಯಾಸಗಳು ಮತ್ತು ಉತ್ಪಾದನೆಯ ಆಧಾರದ ಮೇಲೆ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ. ಪಾಕಿಸ್ತಾನದಲ್ಲಿ : ಪಾಕಿಸ್ತಾನದಲ್ಲಿ ರಾಷ್ಟಿçÃಯ ರೈತ ದಿನಾಚರಣೆಯನ್ನು ಕಿಸಾನ್ ದಿನ ಎಂದೂ ಕರೆಯುತ್ತಾರೆ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 2019 ರ ಡಿಸೆಂಬರ್ 18 ರಂದು ಇಸ್ಲಾಮಾಬಾದ್‌ನಲ್ಲಿ ಆಚರಿಸಲಾಯಿತು. ಇದನ್ನು ಆಗಿನ ಪ್ರಧಾನಿ ಇಮ್ರಾನ್ ಖಾನ್ ಸಹಾ ಒಪ್ಪಿಕೊಂಡರು. ಪಾಕಿಸ್ತಾನದ ಪ್ರಮುಖ ರಸಗೊಬ್ಬರ ಉತ್ಪಾದನಾ ಕಂಪನಿ ಫಾತಿಮಾ ಗ್ರೂಪ್ ಈ ಯೋಜನೆಯನ್ನು ಡಿಸೆಂಬರ್ 18, 2019 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ಮೊದಲ ರೈತರ ದಿನಾಚರಣೆಯನ್ನು ಆಚರಿಸುವಾಗ ರೈತ ಕಲ್ಯಾಣ ಮತ್ತು ಸಮೃದ್ಧಿಯನ್ನು ಉತ್ತೇಜಿಸುವ ಪರವಾಗಿ ಪ್ರಸ್ತಾಪಿಸಿತ್ತು. ಅಮೇರಿಕಾ ಸಂಯುಕ್ತ ಸಂಸ್ಥಾನ : ಅಮೆರಿಕಾದಲ್ಲಿ, ಇದನ್ನು ಪ್ರತಿವರ್ಷ ಅಕ್ಟೋಬರ್ 12 ರಂದು ಆಚರಿಸಲಾಗುತ್ತದೆ. ಅಂದು ಎಲ್ಲಾ ರೈತರಿಗೆ ಗೌರವ ಸಲ್ಲಿಸಲು ಇದನ್ನು ಆಚರಿಸಲಾಗುತ್ತದೆ.

Wednesday, 1 January 2025

ಕೊಡಗಿನ ಅಪರೂಪದ ರುದ್ರಾಕ್ಷಿ

ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ಬೆಳೆಸಿದ ಕೊಡಗಿನ ಅಪರೂಪದ ರುದ್ರಾಕ್ಷಿ
ಚೆಟ್ಟಳ್ಳಿ: ಶಿವನ ಕೊರಳಲ್ಲಿರುವ ರುದ್ರಾಕ್ಷಿಮಣಿಗಳು ಯಾರಿಗೆ ತಾನೆ ತಿಳಿಯದು. ದೈವಸ್ವರೂಪವೆಂದು ಆರಾಧಿಸುವ ಭಕ್ತರು ರುದ್ರಾಕ್ಷಿಯನ್ನು ಭಕ್ತಿ ಪೂರಕವಾಗಿ ಧರಿಸಿ ಪೂಜಿಸುವ ಸಂಪ್ರದಯವಿದೆ. ಇಂತಹ ವಿಶೇಷತರವಾದ ಅಪರೂಪದ ರುದ್ರಾಕ್ಷಿ ಮರವನ್ನು ಮಡಿಕೇರಿ ಸಮೀಪದ ಚೆಟ್ಟಳ್ಳಿಯ ಅಯ್ಯಂಡ್ರ ಗಿರೀಶ್ ಕುಮಾರ್ ತನ್ನ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿ ಕಾಯಿಯನ್ನು ಸಂಗ್ರಹಿಸುತ್ತಿದ್ದಾರೆ. ಹಿಮಾಚ್ಚಾದಿತ ಪರ್ವತ ಶ್ರೇಣಿಗಳಲ್ಲಿ, ನೇಪಾಳದಲ್ಲಿ ಕಂಡುಬರುವ ರುದ್ರಾಕ್ಷಿಯನ್ನು ಕೊಡಗಿನ ವಾತಾವರಣದಲ್ಲಿ ಬೆಳೆಯಲಾಗು ತಿದೆಂದರೆ ಆಶ್ಚರ್ಯವಾಗ ಬಹುದು..!!! ಭಾರತದ ಸಂಬಾರ ಮಂಡಳಿಯಲ್ಲಿ ಸೇವೆ ಸಲ್ಲಿಸಿದಂತ ನಿವ್ರತ್ತ ಅಧಿಕಾರಿ ಗಿರೀಶ್ ಕುಮಾರ್‌ರವರು ಸುಮಾರು ೧೪ವರ್ಷಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಸೇವೆಯಲ್ಲಿದಾಗ ಅಲ್ಲಿ ಬೆಳೆಯಲಾಗುತಿದ್ದ ರುದ್ರಾಕ್ಷಿಯ ಗಿಡವನ್ನು ತನ್ನ ಉತ್ತರ ಕೊಡಗಿನ ಚೆಟ್ಟಳ್ಳಿಯ ಮನೆ ಮುಂದಿನ ಕಾಫಿತೋಟದ ಬದಿಯಲ್ಲಿ ನೆಟ್ಟು ಪೋಷಿಸ ತೊಡಗಿದ್ದರು. ನೋಡುನೋಡುತಿದ್ದಂತೆ ಬೆಳೆದು ಸುಮಾರು ೬ವರ್ಷಗಳಲ್ಲಿ ಹೂವಾಗಿ ಕಾಯಾಗತೊಡಗಿತ್ತು. ವರ್ಷದ ಜೂನ್, ಜುಲೈನಲ್ಲಿ ಮೊದಲಫಸಲು ನವೆಂಬರ್ ಡಿಸಂರ‍್ನಲ್ಲಿ ಎರಡನೇ ಫಸಲಾತತೊಡಗಿತ್ತು. ೧೫ವರ್ಷಗಳಲ್ಲಿ ಸುಮಾರು ೩೫ರಿಂದ ೪೦ ಅಡಿ ಎತ್ತರದ ಹೆಮ್ಮರವಾಗಿ ಕಪ್ಪುಮಿಶ್ರಿತ ದುಂಡಗಿನ ಸಣ್ಣಸಣ್ಣ ಕಾಯಿಗಳು ಬೆಳೆದು ಬೀಳತೊಡಗಿದವು. ಅವನೆಲ್ಲ ಹೆಕ್ಕಿತಂದು ನೀರಿನಲ್ಲಿಟ್ಟು ಸಿಪ್ಪೆತೆಗೆದು ತೊಳೆದು ರುದ್ರಾಕ್ಷಿ ಕಾಯಿಗಳನ್ನು ಸಂಗ್ರಹಿಸುತಿದ್ದಾರೆ. ಪಂಚಮುಖಿಯ ಕಾಯಿಗಳೇ ಹೆಚ್ಚಾಗಿದ್ದು ೮ರಿಂದ೧೨ರಡು ಮುಖದ ಕಾಯಿ(ಮಣಿ)ಗಳು ಅಪರೂಪವಾಗಿ ದೊರೆತಿವೆ.ವಿಶೇಷ ಪಟ್ಟ ಗೌರಿಶಂಕರ ವೆಂಬ ಜೋಡಿ ರುದ್ರಾಕ್ಷಿ ಕಾಯಿ ಒಂದು ದೊರೆತಿದ್ದು ದೇವರ ನೆಲೆಯಲ್ಲಿಟ್ಟು ಪೂಜಿಸಲಾಗುತಿದೆ. ಏಕಮುಖ, ದ್ವಿಮುಖ, ತ್ರಿಮುಖ, ಚುರ್ತುರ್ ಮುಖಿ, ಪಂಚಮುಖಿ, ಷಷ್ಠತಮುಖಿ, ಸಪ್ತಮುಖಿ, ಅಷ್ಟಮುಖಿ, ನವಮುಖಿ, ದಶಮುಖಿ, ಏಕದಶಮುಖಿ, ದ್ವಾಸಶಾಮುಖಿ, ತ್ರಯೋದಶಿಮುಖಿ, ಚರ್ತುಮುಖಿ ವಿಶೇಷಪಟ್ಟ ಹೆಸರಿನಕಾಯಿಯ ಗುಣಲಕ್ಷಣದ ಮೇರೆ ೧೫ರೂಪಾಯಿಯಿಂದ ಸಾವಿರಗಟ್ಟಲೆ ಬೆಲೆಬಾಳುವ ರುದ್ರಾಕ್ಷಿಗಳು ದಕ್ಷಿಣ ಭಾರತದಲ್ಲಿ ಅಪರೂಪ ಜೊತೆಗೆ ಫಸಲು ಬಿಡುವುದಂತೂ ಇನ್ನೂ ಅಪರೂಪ. ಸಂಗ್ರಹಿಸಿದ ಶಿವನಿಗೆ ಪ್ರಿಯವಾದ ಈ ರುದ್ರಾಕ್ಷಿ ಕಾಯಿಗಳನ್ನು ಕೊಡಗಿನ ನಾನಾ ಶಿವಾದೇವಾಯಲಕ್ಕೆ, ಶ್ರೀ ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ ಶಿವಾರಾಧನ ಮಠಗಳಿಗೆ ಕಾಯಿ ನೀಡಿದ್ದು ಹಾಗು ಕೊಡಗಿನ ಕೆದಕಲ್ಲö್ನ ಭದ್ರಕಾಳಿ ದೇವಾಲಯಕ್ಕೆ ಇಗ್ಗುತಪ್ಪ ದೇವಾಲಯಕ್ಕೆ, ಮದೆನಾಡಿನ ಮದೆಮಹದೇಶ್ವರ ದೆವಾಲಯಕ್ಕೆ ಗಿಡಗಳನ್ನು ನೀಡಲಾಗಿದೆಂದು ಅಯ್ಯಂಡ್ರ ಗಿರೀಶ್ ಹೇಳುತ್ತಾರೆ. ರುದ್ರಾಕ್ಷಿ ಕಾಯಿಗಳನ್ನು ತಂದು ಮಣಿಗಳಾಗಿ ಪೋಣಿಸಿ ಮಾಲೆಯಾಗಿಸಿ ದೇವರ ನೆಲೆಯಲ್ಲಿಟ್ಟು ನಿತ್ಯದ ಜಪಕ್ಕೆ ಬಳಸಲಾಗುತಿದ್ದು ಕುಟುಂಬಕ್ಕೆ ಉತ್ತಮ ಫಲ ಜೊತೆಗೆ ಧರಿಸಿದರೆ ಒಳ್ಳೆಯದಾಗುವುದೆಂಬ ನಂಬಿಕೆಯೊAದಿಗೆ ಕುಟುಂಬದವರಲ್ಲರು ಲಾಕೆಟ್ ಮಾಡಿ ಧರಿಸಿದ್ದ ಬಗ್ಗೆ ಪತ್ನಿ ಹೇಳುತ್ತಾರೆ. ಕ್ರಷಿಯ ಬಗ್ಗೆ ಆಸಕ್ತಿಹೊಂದಿರುವ ಗಿರೀಶ್‌ರವರು ತೋಟದಲ್ಲಿ ಮೂರು ರುದ್ರಾಕ್ಷಿ ಗಿಡಗಳನ್ನು ನೆಟ್ಟು ಪೋಶಿಸುತಿರುವ ಜೊತೆಗೆ ಜಾಯಿಕಾಯಿ, ಅಂಜುರ(ಫಿಗ್) ನಾನಾ ವಿಧದ ಸುಗಂಧ ದ್ರವ್ಯದ ಮರಗಳು,ಕಾಚಂಪುಳಿಯAತಹ ಹಲವು ಬಗೆಯ ಮರಗಳನ್ನು ನೆಟ್ಟಿದ್ದಾರೆ. ರುದ್ರಾಕ್ಷಿ ಕಾಯಿಯಲ್ಲಿ ವಿಶೇಷ ಪಟ್ಟ ಔಷಧಿಯ ಗುಣ ಇರುವುದರಿಂದ ಬೋಂಬೆಯ ಮಹೇಶ್‌ಗೋಡ್ ಬೇಲ್ ಎಂಬವರು ಗಿರೀಶ್ ರವರನ್ನು ಸಂಪರ್ಕಿಸಿ ಕಾಯಿಗಳನ್ನು ಕಳುಸಿಕೊಡಬೇಕೆಂದು ಬೇಡಿಕೆ ಇಟ್ಟಮೇರೆಗೆ ಕಳುಸಿದ್ದಾರೆ. ಮನೆಯಲ್ಲಿ ಸಂಗ್ರಹಿಸಿಟ್ಟ ಕಾಯಿಗಳನ್ನು ಬಂಧನೆಟ್ಟರಿಷ್ಟರಿಗೆಲ್ಲ ನೀಡುತಿರುವ ಬಗ್ಗೆ ಹೇಳುತ್ತಾರೆ. ಹೆಚ್ಚಿನ ಮಹಿತಿಗಾಗಿ ೯೪೪೮೦೪೫೪೯೭ ಸಂಪರ್ಕಿಸ ಬಹುದು. -ಪುತ್ತರಿರ ಕರುಣ್ ಕಾಳಯ್ಯ, ಪಪ್ಪುತಿಮ್ಮಯ್ಯ