Thursday, 8 August 2024

ಅಪಾಯಕಾರಿ ಕೀಟನಾಶಕಗಳ ಬಳಕೆ... ?!






ಬರಹ: ಕೂಡಂಡ ರವಿ, ಹೊದ್ದೂರು. 

ಮೊ. 8310130887. 

 ಕೃಷಿಕರು ಅಧಿಕ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿ ಮಿತಿ ಮೀರಿದ ಕೀಟ ನಾಶಕಗಳನ್ನು ಬಳಸುತ್ತಿರುವರು. ಇವು ಜೀವಸಂಕುಲಕ್ಕೆ, ಮಾನವನಿಗೂ ಹಾನಿಕಾರಕವಾಗಿವೆ. ಮಾನವ ಜೀವವನ್ನು ಬಲಿ ಪಡೆಯುವದರ ಜೊತೆಗೆ, ಬಹುತೇಕ ಮಂದಿಯ ಸರಣಿ ಅನಾರೋಗ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿವೆ. 

ಮಾರಾಟಗಾರರಿಗೆ ಆಮಿಷ !

ವಿದೇಶಗಳಲ್ಲಿ ಬಹಿಷ್ಕರಿಸಲಾದ ಕೀಟನಾಶಕಗಳನ್ನು ನಮ್ಮ ದೇಶದಲ್ಲಿ ಮನಸೋ ಇಚ್ಛೆ ಬಳಸಲಾಗುತ್ತಿದೆ. ವಿದೇಶಿ ಬಹುರಾಷ್ಟೀಯ ಕಂಪೆನಿಗಳು ಹತ್ತಾರು ಹೆಸರಿನಲ್ಲಿ ವಿಷವನ್ನು ಮಣ್ಣಿಗೆ ಸೇರಿಸಲು ಭಾರತೀಯ ರೈತರನ್ನು ಪ್ರೇರೇಪಿಸುತ್ತಿವೆ. ಇಲ್ಲಿನ ಮಾರಾಟಗಾರರು ಆಮಿಷಗಳಿಗೆ ಬಲಿ ಬಿದ್ದು ಇವುಗಳ ಅಪಾಯದ ಅರಿವಿದ್ದರೂ, ಮಾರಾಟ ಮಾಡುತ್ತಿರುವರು ! ಬೆಳೆಗಳಿಗೆ ಮಿತಿ ಮೀರಿ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸಿದ್ದಲ್ಲಿ ಮಾನವನಿಗೆ “ಕ್ಯಾನ್ಸರ್” ಖಚಿತ. ಆದರೆ, ಈ ವಿಚಾರವನ್ನು ಬಹುತೇಕ ಮಾಧ್ಯಮಗಳು ಜನತೆಗಳು ತಿಳಿಸುತ್ತಿಲ್ಲ. ಮನೆಗಳಿಗೆ ಸಿಮೆಂಟ್ ಶೀಟ್ ಬಳಸಿದ್ದಲ್ಲಿ ಕ್ಯಾನ್ಸರ್ ಬರುವುದಂತೆ ! ಆದರೂ, ಇವುಗಳ ಮಾರಾಟ ನಿರಾಂತಕವಾಗಿ ನಡೆಯುತ್ತಿದೆ. 

ಮಿತಿಮೀರಿದ ವಿಷ !

ಮಿತಿ ಮೀರಿದ ಕೀಟನಾಶಕಗಳ ಬಳಕೆಯಿಂದ ಪಂಜಾಬ್‌ನಲ್ಲಿ ಸಾವಿರಾರು ರೈತರು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಅದೇ ರೀತಿ  ಎರಡು ದಶಕಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಪಟ್ರಮೆಯಲ್ಲಿ ಗೇರು ತೋಟಗಳಿಗೆ  ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ವಿಷ ಸಿಂಪಡಣೆಯ ಪರಿಣಾಮ ಸಾವಿರಾರು ಮಂದಿ ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಕೊಡಗಿನಲ್ಲಿಯೂ ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಮಿತಿ ಮೀರಿ ವಿಷವನ್ನು ಸಿಂಪಡಿಸಲಾಗುತ್ತದೆ ! ಸೊಪ್ಪು ತರಕಾರಿಗಳಿಗೂ ಅತಿಯಾಗಿ ಕ್ರಿಮಿನಾಶಕ, ರಾಸಯನಿಕ ಗೊಬ್ಬರ ಬಳಕೆಯಾಗುತ್ತಿದೆ. ಒಂದು ಏಕರೆಯಲ್ಲಿ  ಟೊಮೊಟೋ ಬೆಳೆ ಬೆಳೆಯಲು ಒಂದು ಫಸಲಿಗೆ ಸುಮಾರು 30 ಸಾವಿರ ರೂಪಾಯಿಗಳ ಕ್ರಿಮಿನಾಶಕಗಳನ್ನು ಬಳಸಲಾಗುತ್ತದೆ. ದಾಳಿಂಬೆ ಬೆಳೆಯಲ್ಲಿ ಸಹಾ ಧಾರಾಳ ಕ್ರಿಮಿನಾಶಕಗಳ ಬಳಕೆಯಾಗುತ್ತಿದೆ. ಜನತೆಯ ಪ್ರಾಣಕ್ಕೆ ಸಂಚಕಾರ ತರುವಂತಹ ವಿಷದ ಮಾರಾಟ, ಬಳಕೆಗೆ ಸರಕಾರಗಳು ಏಕೆ ಕಡಿವಾಣ ಹಾಕುತ್ತಿಲ್ಲ. ಅದರ ಉತ್ಪಾದನೆಗೆ ಏಕೆ ಮುಂದಾಗುತ್ತಿಲ್ಲ. ಬಹುಶ್ಯ ಕಂಪೆನಿಗಳು ಆಮಿಷಗಳಿಗೆ ಸರಕಾರ, ಜನತೆ ಬಲಿ ಪಶುವಾಗುತ್ತಿರುವರೋ ? 

 ಸರಕಾರದ ವರದಿ

ಮಹಾರಾಷ್ಟçದ ಒಣಭೂಮಿ ಪ್ರದೇಶವಾದ ವಿದರ್ಭದಲ್ಲಿ ರೈತರ ಸಾವು- ಆತ್ಮಹತ್ಯೆಗಳಿಗೆ ಕೊನೆಯೇ ಇಲ್ಲ ಎಂಬAತಾಗಿದೆ. ಅಲ್ಲಿ 2001 ರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರ ನಂತರ ರಾಸಾಯನಿಕ ಕೀಟನಾಶಕಗಳ ವಿಷದಿಂದಾಗಿ ಸುಮಾರು 35ಕ್ಕೂ ಅಧಿಕ ರೈತರು-ಕೃಷಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾಸಾಯನಿಕ ಸಿಂಪಡಣೆ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ. ಪರಿಣಾಮ  ಇವರ ಶ್ವಾಸಕೋಶಗಳಿಗೆ ವಿಷ ನುಗ್ಗಿ ಬಹುತೇಕ ಸಾವು ಸಂಭವಿಸಿವೆ. ಸಾವಿಗೆ ಮೊನೋಕ್ರೊಟೋಫಾಸ್, ಆಕ್ಸಿಡೆಮೆಟೊನ್–ಮಿಥೈಲ್, ಅಸೆಫೇಟ್, ಪ್ರೊಫೆನೊಫೋಸ್, ಫ್ರಿಪ್ರೊನಿಲ್, ಇಮಿಡಾಕ್ಲೊಫ್ರಿಡ್ ಮತ್ತು ಸೈಪಮ್ರೆಥಿನ್ ಮುಂತಾದ ಕೀಟನಾಶಕಗಳೆ ಕಾರಣವೆಂದು ಸರಕಾರ ಸಿದ್ಧಪಡಿಸಿದ ಸತ್ಯಶೋಧನಾ ವರದಿಗಳು ಉಲ್ಲೇಖಿಸಿವೆ. ಇದರ ಪರಿಣಾಮ ಕೆಲವು ಔಷಧಿಗಳ ಬಳಕೆಯನ್ನು ಅಲ್ಲಿನ ಸರಕಾರ ತಾತ್ಕಲಿಕವಾಗಿ ನಿಷೇಧಿಸಿತ್ತು. ಕೇಂದ್ರ ಸರಕಾರವು “ವಿದರ್ಭ” ಪ್ಯಾಕೇಜ್ ಅನ್ನು ಫೋಷಿಸಿತ್ತು. ಆದರೆ, ಅಪಾಯಕಾರಿ ಪೀಡೆನಾಶಕಗಳನ್ನು ಖಾಯಂ ಆಗಿ ನಿಷೇಧಿಸುವ ಚಿಂತನೆಯನ್ನು ಸರಕಾರಗಳು ಇನ್ನೂ ಮಾಡದೇ ಇರುವುದು ವಿಪರ್ಯಾಸ. 

ಮಾರಕ ವಿಷಗಳ ನಿಷೇಧ ? 

ಯೂರೋಪಿಯನ್ ಯೂನಿಯನ್ ಸೇರಿದಂತೆ ವಿವಿಧ ರಾಷ್ಟçಗಳಲ್ಲಿ ನಿಷೇಧಿತವಾದ ಕ್ರಿಮಿನಾಶಕಗಳು ನಮ್ಮಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೇಂದ್ರ ಕೃಷಿ ಮತ್ತು ಕೃಷಿಕ ಕಲ್ಯಾಣ ಮಂತ್ರಾಲಯದ ಅಂಗಸAಸ್ಥೆಯ ಮಾಹಿತಿಯನ್ವಯ 2015-16ರಲ್ಲಿ ಬಳಕೆಯಾದ ಒಟ್ಟು 7, 717 ಟನ್ ಕೀಟನಾಶಕಗಳಲ್ಲಿ ಶೇ. 30ರಷ್ಟು (2, 254 ಟನ್) ಮಾರಕವಾದ ಕ್ಲಾಸ್-1 ವಿಷಕಾರಿ ಕೀಟನಾಶಕಗಳಾಗಿವೆ !

2003ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರೊಪೆಸರ್ ಅನುಪಮಾ ವರ್ಮ ಅಧ್ಯಕ್ಷರಾಗಿದ್ದ ಪರಿಣಿತರ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು. ಆದರ ವರದಿಯನುಸಾರ 2018ರ-21ರ ಅವಧಿಯಲ್ಲಿ ಏಳು ಭಾರೀ ವಿಷ ಹೊಂದಿರುವ ಕೀಟನಾಶಕಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಆದರೆ, ಇದರಲ್ಲಿ ಮಹಾರಾಷ್ಟçದಲ್ಲಿ ರೈತರನ್ನು ಬಲಿ ಪಡೆದ ಎರಡು ಘೋರ ಕ್ರಿಮಿನಾಶಕಗಳು ಸೇರಿಲ್ಲ ? ಪ್ರತೀ ವರ್ಷ ಭಾರತದಲ್ಲಿ ಸುಮಾರು 10 ಸಾವಿರ ಪೀಡೆನಾಶಕಗಳ ವಿಷಬಾಧೆಯ ಪ್ರಕರಣಗಳು ವರದಿಯಾಗುತ್ತಿವೆ. 

ಮಾಹಿತಿಯೇ ಇಲ್ಲದ ಕೃಷಿಕ ಸಮುದಾಯ !

ಹಲವಾರು ರೈತಾಪಿ ವರ್ಗದವರಿಗೆ ಯಾವ ಬೆಳೆೆಗಳಿಗೆ ಯಾವ ಯಾವ ಕಾಯಿಲೆ ಬರುತ್ತದೆ. ಅವುಗಳ ನಿಯಂತ್ರಣಕ್ಕೆ ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬ ಕನಿಷ್ಠ ಜ್ಞಾನವೇ ಇಲ್ಲ. ಹಲವರು ಔಷಧಿ ಅಂಗಡಿಯ ಸಿಬ್ಬಂದಿ ಅಥವಾ ಮಾಲೀಕರನ್ನು ಈ ಬಗ್ಗೆ ವಿಚಾರಿಸುವರು. ಅವರು ಹೇಳಿದ ಔಷಧಿಗಳನ್ನು ದುಬಾರಿ ಬೆಲೆ ತೆತ್ತು ಕೊಳ್ಳುವುದು ಸಾಮಾನ್ಯ ಸಂಗತಿ. ಇಂತಹ ಸಮಸ್ಯೆಗಳು ಎದುರಾದಾಗ ಸಮೀಪದ ತೋಟಗಾರಿಕೆ ಅಥವಾ ಕೃಷಿ ಇಲಾಖಾಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ. ಇಲ್ಲವೆ, ಸಮೀಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸುವುದು ಅತ್ಯುತ್ತಮ. ಬಹುತೇಕ ಔಷಧಿ ಮಾರಾಟ ಮಳಿಗೆಯವರಿಗೆ ಔಷಧಿಯ ಬಗ್ಗೆ ಕನಿಷ್ಠ ಜ್ಞಾನವೂ ಇರುವುದಿಲ್ಲ ಎಂಬ ಸಾಮಾನ್ಯ ವಿಚಾರವು ನಮ್ಮ ಕೃಷಿಕ ಸಮುದಾಯಕ್ಕೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕೃಷಿಕ ಸಮುದಾಯದವರ ಅಲ್ಪಜ್ಞಾನವನ್ನೇ ದಾಳವನ್ನಾಗಿ ಬಳಸಿಕೊಂಡು ಸ್ವದೇಶಿ ಮತ್ತು ವಿದೇಶಿ ಕಂಪನಿಗಳು ಕೃಷಿಕ ಸಮುದಾಯವನ್ನು ಸುಲಿಗೆ ಮಾಡುತ್ತಿವೆ. ಮಣ್ಣಿಗೆ ಮನಬಂದAತೆ ವಿಷ ಸುರಿಯಲು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿವೆ. ಇದರಿಂದ ಬಳಕೆದಾರರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. 

ಮುಂಜಾಗರೂಕತೆಯ ಕೊರತೆ ? 

ನಮ್ಮ ದೇಶದ ಬಹುಪಾಲು ರೈತರು, ಕೃಷಿ ಕಾರ್ಮಿಕರು ಕ್ರಿಮಿನಾಶಕಗಳ ಬಳಕೆಯ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಸುರಕ್ಷತೆಯ ಬಳಕೆಯೇ ಬಹುಪಾಲು ಸಾವಿಗೆ ಮೂಲ ಕಾರಣವೆಂದು ಕೇಂದ್ರ ಮಂತ್ರಾಲಯ ಮತ್ತು ರಾಜ್ಯಕೃಷಿ ಇಲಾಖೆಗಳೇ ಕಾರಣವೆಂದು ದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಾರ‍್ಮೆಂಟ್ ಉಪ ಮಹಾ ನಿರ್ದೇಶಕ ಚಂದ್ರಭೂಷಣ್ ಆಭಿಪ್ರಾಯಿಸುತ್ತಾರೆ. ಬಹುಪಾಲು ರೈತರಿಗೆ, ಕಾರ್ಮಿಕ ವರ್ಗದವರಿಗೆ ಅವರ ಕುಟುಂಬದವರಿಗೆ ಪೀಡೆನಾಶಕಗಳ ಬಳಕೆಯ ಅಪಾಯಗಳ ಅರಿವಿಲ್ಲ. ಈ ಬಗ್ಗೆ ಸರಕಾರಿ ಇಲಾಖೆಗಳು, ಖಾಸಗಿ ಸ್ವಯಂಸೇವಾ ಸಂಸ್ಥೆಗಳು ಮಾಹಿತಿ ನೀಡುತ್ತಿಲ್ಲ. ಬಹುತೇಕ ಮಾಧ್ಯಮಗಳು ಇವುಗಳ ಬಗ್ಗೆ ಮೌನವಹಿಸಿವೆ. ವಿವೇಚನಾ ರಹಿತವಾಗಿ ಘೋರ ವಿಷವನ್ನು ಬಳಸುವುದರಿಂದ ಇದರ ಬಳಕೆದಾರರು ಸುಲಭವಾಗಿ ಇವಕ್ಕೆ ಬಲಿಯಾಗುತ್ತಿದ್ದಾರೆ. 

 ನಮ್ಮಲ್ಲಿ ಸಾವಿರಾರು ಕೃಷಿಯ ಮುಖಮುದ್ರೆಯುಳ್ಳ ವೆಬ್‌ಗಳು, ಕೃಷಿ ಸಂಬAಧಿತ ಪತ್ರಿಕೆಗಳು, ಸ್ವಯಂಸೇವಾ ಸಂಸ್ಥೆಗಳಿವೆ. ರೈತ ಪರ ಸಂಘಟನೆಗಳಿವೆ. ಅದರೂ, ಯಾರೂ ಈ ಬಗ್ಗೆ ಅಪಾಯಕಾರಿ ಔಷಧಿಗಳ ಬಗ್ಗೆ ಚಕಾರವೆತ್ತದಿರುವುದು ನಮ್ಮ ದುರಂತ. 

 ಇವುಗಳ ಅಪಾಯಗಳ ಬಗ್ಗೆ ಅರಿತು ರೈತ ಸೇವಾ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಾಹಿತಿ ನೀಡಿದ್ದಲ್ಲಿ ಸಾವಿನ ಸಂಖ್ಯೆ ಕೊಂಚ ಇಳಿದೀತು. ಸರಕಾರ ಘೋರ ವಿಷಗಳನ್ನು ನಿಷೇಧಿಸುವ ಮುನ್ನಾ ರೈತರೇ ಇವುಗಳನ್ನು ನಿಷೇಧಿಸಬೇಕಿದೆ. ಇಲ್ಲವಾದಲ್ಲಿ ಭಾರತೀಯ ರೈತರಿಗೆ ಹೆಚ್ಚು ದಿನ ಆರೋಗ್ಯವಂತರಾಗಿ ಬಾಳಲಾರರು .

ಇದಕ್ಕೆಲ್ಲ ಪರಿಹಾರ ದೇಸಿ ಗೋವಾಆದರಿತ ನೈಸರ್ಗಿಕ ಕೃಷಿ

                              --------