Wednesday, 25 September 2024

*ಆರೋಗ್ಯದ ದೃಷ್ಟಿಯಲ್ಲಿ ಸಾವಯವ ಕೃಷಿ ಪದ್ಧತಿ*-ಡಾ || ಗ್ರೀಷ್ಮಾ ಗೌಡ ಆರ್ನೋಜಿ

ಡಾ || ಗ್ರೀಷ್ಮಾ ಗೌಡ ಆರ್ನೋಜಿ ವೈದ್ಯರು,ಸಂಪೂರ್ಣ ಪಾಲಿಕ್ಲಿನಿಕ್ ಕಡಬ 'ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ', ಎಂಬ ಮಾತಿದೆ.ಅದರಂತೆ, ನಾವು ಹೇಗೆ ನಮ್ಮ ದೇಹವನ್ನು ನೋಡಿಕೊಳ್ಳುತ್ತೇವೆಯೋ,ಹಾಗೆ ನಮಗೆ ಬರುವ ರೋಗಗಳನ್ನು ತಡೆಯ ಬಹುದು.ಸರಿಯಾದ ಆಹಾರ ಪದ್ಧತಿ, ವ್ಯಾಯಾಮ,ವಿಶ್ರಾಂತಿ,ನಿದ್ದೆ,ಒಳ್ಳೆಯ ಆಚಾರ-ವಿಚಾರಗಳನ್ನು ಪಾಲಿಸುವುದು ಇವೆಲ್ಲ ಸದೃಢ ಆರೋಗ್ಯಕ್ಕೆ ಸುಲಭ ಮಾರ್ಗ.ಉತ್ತಮ ಆಹಾರ ಪದ್ಧತಿ ಅಂದಾಗ ಬರಿ ಅಡುಗೆ ಮನೆಗೆ ಸಂಬಂಧ ಪಟ್ಟಿದ್ದಲ್ಲ.ಆಹಾರ ಪದಾರ್ಥಗಳು ಎಲ್ಲಿಂದ ಬಂತು ಹಾಗೂ ಅವುಗಳನ್ನು ಹೇಗೆ ಬೆಳೆಸಲಾಯಿತು ಎಂಬುದರ ಬಗ್ಗೆ ಯೋಚಿಸಬೇಕು. ರೈತರು ಉತ್ತಮ ಇಳುವರಿಗೆ ರಾಸಾಯನಿಕ ರಸ ಗೊಬ್ಬರಗಳು, ಕಳೆನಾಶಕ ,ವಿಷಪೂರಿತ ಕೀಟನಾಶಕಗಳನ್ನು ಬಳಸುತ್ತಾರೆ.ಇದರಿಂದಾಗಿ, ಮಾರಣಾಂತಿಕ ರೋಗಗಳು ಬರುತ್ತವೆ. ಸಸ್ಯದ ಬೆಳವಣಿಗೆಯನ್ನು ಹೆಚ್ಚಿಸಲು ನೈಟ್ರೋಜನ್, ಪಾಸ್ಫರಸ್, ಫೋಟೋಸ್ ಗಳನ್ನು ಹೊಂದಿದ ರಾಸಾಯನಿಕ ರಸಗೊಬ್ಬರಗಳನ್ನು ಬಳಸುತ್ತಾರೆ.ಇದು ಕುಡಿಯುವ ನೀರನ್ನು ಕಲುಷಿತಗೊಳಿಸುತ್ತದೆ. ಜೊತೆಗೆ,ನೀರಲ್ಲಿದ್ದ ಜಲಚರಗಳನ್ನು ನಾಶ ಮಾಡಿ ವಿಷಪೂರಿತ ಸಸ್ಯಗಳು ಬೆಳೆಯುವಂತೆ ಮಾಡುತ್ತದೆ.ಇದು ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕೀಟನಾಶಕಗಳು ಕೃಷಿಗೆ ಬರುವ ಹುಳ-ಉಪ್ಪಟೆಗಳನ್ನು ನಾಶಮಾಡುತ್ತದೆ.ಅದೇ ಕೀಟನಾಶಕ ಗಳನ್ನು ಬಳಸಿದ ಹಣ್ಣು,ತರಕಾರಿಗಳನ್ನು ನಾವು ತಿಂದರೆ ಕ್ಯಾನ್ಸರ್, ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆಗಳು,ಬಂಜೆತನ, ಬೆಳವಣಿಗೆ ಕುಂಟಿತಗೊಳ್ಳುವ ಸಮಸ್ಯೆಗಳು ಉಂಟಾಗುತ್ತದೆ. ಈಗ ನಾನಾ ರೀತಿಯ ಕಳೆ ನಾಶಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದನ್ನು ಸಿಂಪಡಿಸಿದರೆ ಎರಡು ದಿನದಲ್ಲಿ ಹುಲ್ಲು ಸುಟ್ಟು ಹೋಗುತ್ತದೆ.ಇದರಲ್ಲಿ ಬಳಸುವ ಗ್ಯೆಫಾಸೆಟ್ ಎಂಬ ರಾಸಾಯನಿಕ ವಸ್ತು ಕ್ಯಾನ್ಸರ್ ಕಾರಕವಾಗಿದೆ.ಜೊತೆಗೆ,ದೇಹದ ಹಾರ್ಮೋನ್ ಸಮಸ್ಯೆ,ಬಂಜೆತನ,ಬುದ್ಧಿಮಾಂದ್ಯತೆ, ಬೆಳವಣಿಗೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದನ್ನೆಲ್ಲ ನೋಡಿದಾಗ ನಮಗೆ ಅನಿಸುವುದು ಒಂದೆ, ನಾವು ದಿನನಿತ್ಯ ಸೇವಿಸುವುದು ವಿಷಪೂರಿತ ಆಹಾರವೇ?. ಹೇಗೆ ನಾವು ಇದರಿಂದ ಹೊರಬಂದು ಸ್ವಚ್ಛ ಆಹಾರ ಪದಾರ್ಥಗಳನ್ನು ಸೇವಿಸುವ ಎಂದು. ಅದಕ್ಕೆ ಇರುವುದು ಒಂದೇ ದಾರಿ ಸಾವಯವ ಕೃಷಿ. ಸಾವಯವ ಕೃಷಿ ಎಂದರೆ ಸುಸ್ಥಿರತೆ, ಜೀವವೈವಿಧ್ಯ ಮತ್ತು ಪರಿಸರ ಸಮತೋಲನಕ್ಕೆ ಒತ್ತು ನೀಡುವ ಕೃಷಿ ವಿಧಾನ. ಪ್ರಾಣಿಗಳ ಗೊಬ್ಬರ,ದನದ ಹಟ್ಟಿಗೊಬ್ಬರ,ಜೀವಾಮೃತ ಅಥವಾ ನೈಸರ್ಗಿಕ ತ್ಯಾಜ್ಯಗಳನ್ನು ಉಪಯೋಗಿಸಿ ಮಾಡುವ ಕೃಷಿ ಪದ್ಧತಿ.ಇದರಲ್ಲಿ,ಜೈವಿಕ ಕೀಟ ನಿಯಂತ್ರಣ,ಸರದಿ ಬೆಳೆ,ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಹೆಚ್ಚು ಕಾಳಜಿ ವಹಿಸುತ್ತದೆ. *ನಮ್ಮ ಆರೋಗ್ಯದ ಮೇಲೆ ಸಾವಯವ ಕೃಷಿಯ ಆಹಾರದ ಪ್ರಯೋಜನಗಳೇನು* * ಪ್ರತಿಯೊಬ್ಬರ ಮನೆಯ ಸುತ್ತಲು ಒಂದು ಸಣ್ಣ ಕೈತೋಟ ಮಾಡಿದರೆ, ತಮ್ಮ ದಿನನಿತ್ಯಕ್ಕೆ ಬೇಕಾದ ತರಕಾರಿ, ಸೊಪ್ಪು, ಹಣ್ಣು-ಹಂಪಲುಗಳನ್ನು ತಾವೇ ಬೆಳೆಸಬಹುದು. ಈ ರೀತಿ ಬೆಳೆದ ಆಹಾರ ಉತ್ಪನ್ನಗಳಲ್ಲಿ ದೇಹಕ್ಕೆ ಬೇಕಾದ ಜೀವ ಸತ್ವಗಳು, ಖನಿಜಾಂಶಗಳು ಸರಿಯಾದ ಪ್ರಮಾಣದಲ್ಲಿ ದೊರೆಯುತ್ತದೆ.ಇದು, ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. * ಸಾವಯವ ಕೃಷಿಯಲ್ಲಿ ಯಾವುದೇ ಹಾರ್ಮೋನ್ ಗಳು ಅಥವಾ ರಾಸಾಯನಿಕ ಗಳನ್ನು ಬಳಸದ ಕಾರಣ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ * ಸಾವಯವ ಕೃಷಿಯಿಂದ ಬೆಳೆದ ಆಹಾರ ಉತ್ಪನ್ನ ಗಟ್ ಬ್ಯಾಕ್ಟೀರಿಯಾವನ್ನು ಹೆಚ್ಚಿಸುವುದರಿಂದ ಜೀರ್ಣಾಂಗವ್ಯೂಹದ ಆರೋಗ್ಯ ವನ್ನು ಕಾಪಾಡುತ್ತದೆ. * ಸಾವಯವ ಕೃಷಿಯಿಂದ ನಮಗೆ ಬೇಕಾದ ಋತುಕಾಲಿಕ ಆಹಾರಗಳು ದೊರೆಯುತ್ತವೆ. ಇದು ನಮಗೆ ಆ ಋತುವಿನ ಆರೋಗ್ಯವನ್ನು ಕಾಪಾಡುತ್ತದೆ.ಜೊತೆಗೆ,ಸ್ಥಾನಿಕ ಆಹಾರ ಉತ್ಪನ್ನ ಸಿಗುತ್ತದೆ.ಇದು,ನಮ್ಮ ದೇಹದಲ್ಲಿ ಕೊರತೆ ಇರುವ ಜೀವಾಂಶವನ್ನು ಒದಗಿಸುತ್ತದೆ. * ನೈಸರ್ಗಿಕ ಕೃಷಿಯಲ್ಲಿ ದನ-ಕರುಗಳನ್ನು ಗುಡ್ಡೆಗೆ ಮೇಯಲು ಬಿಡುವುದರಿಂದ ಆ ದನದ ಹಾಲು, ಸಂಸ್ಕರಿಸಿದ ಹಾಲಿನಲ್ಲಿ ಕೊರತೆ ಇರುವ ವಿಟಮಿನ್ ಡಿ ಅಂಶವನ್ನು ಒದಗಿಸುತ್ತದೆ. ಸಾವಯವ ಕೃಷಿ ಉತ್ಪನ್ನಗಳು ಆರೋಗ್ಯ ದೃಷ್ಟಿಯಿಂದ ಎಷ್ಟು ಉಪಯುಕ್ತವೋ, ಈ ರೀತಿಯ ಕೃಷಿ ಪದ್ಧತಿ ಪರಿಸರದ ಸಮತೋಲನಕ್ಕೆ ಅಷ್ಟೇ ಉಪಕಾರಿಯಾಗಿದೆ. ಹಾಗಾಗಿ,ಆದಷ್ಟು ನೈಸರ್ಗಿಕ ಕೃಷಿ ಪದ್ಧತಿಯನ್ನು ಪಾಲಿಸೋಣ ಹಾಗೂ ಮುಂದಿನ ಪೀಳಿಗೆಗೆ ಆರೋಗ್ಯಯುಕ್ತ ಕೃಷಿ ಭೂಮಿಯನ್ನು ಒದಗಿಸೋಣ.

Thursday, 12 September 2024

ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭ-ರೋಟರಿ ಕ್ಲಬ್ ಸುಬ್ರಮಣ್ಯ ದಿಂದ

 ಬರಹ :ಷಣ್ಮುಖ ಕಟ್ಟ,ಅಗ್ರಿಕಲ್ಚರ್ ಡೆಸ್ಕ್ 



ನಿನ್ನೆ (12 .9 .24) ಕುಕ್ಕೆ ಸುಬ್ರಮಣ್ಯ ದಲ್ಲಿ "ಮಿಯಾವಕಿ" ವನ ಆರಂಭಕ್ಕೆ ಹೋಗಿದ್ದೆ .ರೋಟರಿ ಕ್ಲಬ್ ಸುಬ್ರಮಣ್ಯ ಮತ್ತು ಇತರ ಸಂಘ ಸಂಸ್ಥೆಗಳ ಮುಂದಾಳುವತ್ವ ದಲ್ಲಿ ನಡೆದಿತ್ತು .ಸಂಪನ್ಮೂಲ ವಕ್ತಿ ಯಾಗಿ ಶ್ರೀ ಕೆ ಮಹೇಶ್ shenoy ರವರು ದೂರದ ಕಟಪಾಡಿ ಉಡುಪಿನಿಂದ ಬಂದಿದ್ದರು .ಸುಬ್ರಮಣ್ಯ ಕೆ. ಸ್. ಸ್. ಡಿಗ್ರಿ ಕಾಲೇಜು ವಿದ್ಯಾರ್ಥಿ ಗಳು ಸ್ವಯಂಸೇವಕರಾಗಿ ಪಾಲ್ಗೊಂಡರು .ಮಹೇಶ್ shenoy ರವರು ಮಿಯಾವಕಿ ಅರಣ್ಯ ತಜ್ಞ ರಾಗಿದ್ದು ಕರ್ನಾಟಕ ದಾದ್ಯಂತ ಹಲವಾರು ಮಿಯಾವಕಿ ಕಾಡುಗಳನ್ನು ನಿರ್ಮಿಸಿದ್ದಾರೆ .ಮಹೇಶ್ shenoy ರವರ ಪರಿಸರ ದ ಬಗ್ಗೆ ಭಾಷಣ ಕೇಳಿ ಮೈ ರೋಮಾಂಚನ ಆಯಿತು .ಮಹೇಶ್ shenoy ರವರು online ನಲ್ಲಿ "ಮಾರ್ನಿಂಗ್ ಮಿರಾಕಲ್ " ಎಂಬ ಕಾನ್ಸೆಪ್ಟ್ ನಲ್ಲಿ ಕ್ಲಾಸ್ ಕೊಡುತಾರೆ . ಬೆಳಿಗ್ಗೆ ಬೇಗ ಬ್ರಾಹ್ಮೀ ಮುಹೂರ್ತ ದಲ್ಲಿ ಎದ್ದೇಳಿದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಎಂದು ಇವರ ಕಾನ್ಸೆಪ್ಟ್ .ಇವರ ತರಗತಿ ಇಂದ ಪ್ರೇರಿಪಿತರಾಗಿ ಹಲವಾರು ಜೀವನದಲ್ಲಿ ಸಾಧನೆ ಮಾಡಿದ್ದಾರೆ .ಇಂತಹ ವ್ಯಕ್ತಿಯ ಪರಿಚಯ ವಾದದ್ದು ನನ್ನ ಸೌಭಾಗ್ಯ .ಸುಬ್ರಮಣ್ಯ ರೋಟರಿ ಕ್ಲಬ್ ನ ಇಂತಹ ಪರಿಸರ ಕಾಳಜಿಯ ಕೆಲಸ ಅಭಿನಂದನೆಗೆ ಅರ್ಹ .ಯಾವುದೇ ಪ್ರಚಾರ ಬಯಸದೆ ಸುಬ್ರಮಣ್ಯ ರೋಟರಿ ಕ್ಲಬ್ ಇಂತಹ ಹಲವಾರು ಸಮಾಜ ಕಾರ್ಯ ಕೆಲಸಗಳನ್ನು ಮಾಡಿದೆ ಮತ್ತು ಮಾಡುತ್ತಿದೆ ."ಮಿಯಾವಕಿ " ಬಗ್ಗೆ ಮಾಹಿತಿ ಮತ್ತು ನಾನ ುಕೂಡಾ ಗಿಡನೆಡುವ ಕಾರ್ಯ ದಲ್ಲಿ ಪಾಲ್ಗೊಂಡದ್ದು ನೆನಪಿನಲ್ಲಿ ಅಚ್ಚಳಿಯದಂತೆ ಇರುವbಸಂತೋಷದ ವಿಷಯ -------------------------------------------------------------------------------------------

 ವಿಷಯ .ಜಪಾನ್‌ ಮೂಲದ ʻಮಿಯಾವಾಕಿ ಫಾರೆಸ್ಟ್‌ʼ(From Facebook)

✍🏻 ನಾಗೇಶ್ ಹೆಗ್ಡೆ 

ಇಪ್ಪತ್ತು ವರ್ಷಗಳಲ್ಲಿ ಬೆಳೆಯುವಷ್ಟು ಅರಣ್ಯವನ್ನು ಐದೇ ವರ್ಷಗಳಲ್ಲಿ, ಅಷ್ಟೇ ದಟ್ಟವಾಗಿ  ನಿರ್ಮಿಸುವ ಸಾಧನೆಗೆ ʻಮಿಯಾವಾಕಿ ವಿಧಾನʼ ಎನ್ನುತ್ತಾರೆ.  ಚಿಕ್ಕ ಪುಟ್ಟ (10x40ಅಡಿ) ವಿಸ್ತೀರ್ಣದಲ್ಲೂ ಇಂಥ ಅರಣ್ಯಗಳನ್ನು ಬೆಳೆಸಬಹುದು.
ಇಂದು, ಮಾರ್ಚ್‌ 21 ವಿಶ್ವ ಅರಣ್ಯ ದಿನ. ಹಿಂದೆಂದೂ ಕಾಣದಷ್ಟು ತೀವ್ರ ಮಟ್ಟದಲ್ಲಿ ಭೂಮಿ 2023ರಲ್ಲಿ ಬಿಸಿಯಾಗಿದೆ ಎಂದು ವಿಶ್ವ ಪವನವಿಜ್ಞಾನ ಸಂಸ್ಥೆ ಹೇಳಿದೆ. ತಾಪಮಾನದ ಈ ಏರಿಕೆ ಈ ವರ್ಷ ಇನ್ನೂ ಹೆಚ್ಚುತ್ತದೆ ಎಂತಲೂ ವಿಜ್ಞಾನಿಗಳು ಹೇಳುತ್ತಿದ್ದಾರೆ. 
ಅದನ್ನು ತಡೆಯಲು ನಮಗೆ ಸದ್ಯದಲ್ಲಂತೂ ಸಾಧ್ಯವಿಲ್ಲ. ಆದರೆ ಸ್ವಲ್ಪ ಪ್ರಯತ್ನಪಟ್ಟರೆ ತ್ವರಿತವಾಗಿ ದಟ್ಟ ಅರಣ್ಯವನ್ನು ನಿರ್ಮಿಸಿಕೊಂಡರೆ ಅಷ್ಟರ ಮಟ್ಟಿಗೆ ನಮ್ಮ ಸಮೀಪ ತಂಪನ್ನು ಸೃಷ್ಟಿಸಬಹುದು. ಆಘಾತವನ್ನು ತಗ್ಗಿಸಿಕೊಳ್ಳಬಹುದು. ತಮ್ಮದಲ್ಲದ ತಪ್ಪಿನಿಂದ ಸಂಕಟ ಅನುಭವಿಸಬೇಕಾದ ಪ್ರಾಣಿಪಕ್ಷಿಗಳ ಸಂತತಿಯೂ ಆಶ್ರಯ ಪಡೆಯಬಹುದು.  ಪ್ರಕೃತಿ ನಮಗೆ ಅಷ್ಟು ಕಾಲಾವಕಾಶವನ್ನು ನೀಡಿದೆ.
ಮಿಯಾವಾಕಿ ಅರಣ್ಯ ನಿರ್ಮಾಣದ ಕ್ರಮಗಳು ಹೀಗಿವೆ:
ಮೊದಲು ನಿಮ್ಮ ಊರಿನ ಆಸುಪಾಸಿನ ಸಹಜ ನಿಸರ್ಗದಲ್ಲಿ ಯಾವ ಯಾವ ಗಿಡಮರ ಬೆಳೆಯುತ್ತವೆ ಎಂಬುದನ್ನು ಪಟ್ಟಿ ಮಾಡಿಕೊಳ್ಳಿ.
ಅವುಗಳಲ್ಲಿ ಎತ್ತರಕ್ಕೆ ಬೆಳೆಯುವ ಮರಗಳು ಯಾವವು, ಮಧ್ಯಮ ಎತ್ತರಕ್ಕೆ ಬೆಳೆಯುವುದು ಯಾವವು ಮತ್ತು ಆಳೆತ್ತರಕ್ಕೆ ಮಾತ್ರ ಬೆಳೆಯುವ ಸಸ್ಯಗಳು ಯಾವವು ಎಂಬುದನ್ನು ಗಮನಿಸಿ. ಅವೆಲ್ಲವುಗಳ ಬೀಜಗಳನ್ನು (ಇಲ್ಲವೆ ಅಂಕುರಗಳನ್ನು ಅಥವಾ ಗಡ್ಡೆ/ಟೊಂಗೆಗಳನ್ನು) ಶೇಖರಿಸಿ ಇಟ್ಟುಕೊಳ್ಳಿ.
ಮುಂದಿನ ಹಂತದಲ್ಲಿ (ಇದು ತುಸು ಕಷ್ಟ) ನೀವು ಅರಣ್ಯ ಬೆಳೆಸಲು ಆಯ್ಕೆ ಮಾಡಿಕೊಂಡ ತಾಣದಲ್ಲಿ ಮೂರು/ನಾಲ್ಕು ಅಡಿ ಆಳವಾದ ಗುಂಡಿಯನ್ನು ತೋಡಿರಿ. ಅಥವಾ ಜೆಸಿಬಿ ಮೂಲಕ ಉದ್ದನ್ನ ಕಂದಕವನ್ನು ತೋಡಿ. ಅದರಲ್ಲಿ ಕಳಿತ ಗೊಬ್ಬರ, ತರಗೆಲೆ, ಒಣಹುಲ್ಲು ಅಥವಾ ಕೊಕೊಪಿತ್‌ನಂಥ ನಾರುಗಳನ್ನೂ  ತುಸು ಮಣ್ಣನ್ನೂ ಸೇರಿಸಿ ತುಂಬಿರಿ. 
ಅದರಲ್ಲಿ ಅತ್ಯಂತ ಸಾಂದ್ರವಾಗಿ, ಅಂದರೆ ಒಂದೊಂದು ಮೀಟರಿಗೆ ಎರಡು ಮೂರು  ಸಸಿಗಳು ಚಿಗುರಿ ಏಳುವಂತೆ ವ್ಯವಸ್ಥೆ ಮಾಡಿ. ಅಂದರೆ ಬೀಜ/ಗಡ್ಡೆ/ ಮೊಳಕೆಗಳನ್ನು ಊರಿ, ಮುಚ್ಚಿ, ಆರಂಭದಲ್ಲಿ ನೀರುಣ್ಣಿಸಿ. 
ಮಳೆಗಾಲದ ಪ್ರಾರಂಭದಲ್ಲಿ ಇದನ್ನು ಮಾಡುವುದು ಒಳ್ಳೆಯದು. ಅಥವಾ ಸಸ್ಯಗಳು ಚಿಗುರಿ ಏರುವವರೆಗೂ ನೀರುಣ್ಣಿಸಬೇಕು. ಒಂದೇ ವರ್ಗದ  (ಎತ್ತರ, ಮಧ್ಯಮ ಮತ್ತು ಗಿಡ್ಡ) ಸಸ್ಯಗಳು ಒಂದರ ಪಕ್ಕ ಒಂದು ಬಾರದಂತೆ, ಮಧ್ಯೆ ಮಧ್ಯೆ ವಿಭಿನ್ನ ಎತ್ತರದವು  ಏಳುವಂತೆ ಬೀಜ ನಾಟಿ ಮಾಡಿ.
ಗೊಬ್ಬರ ಮತ್ತು ಮೆದುಮಣ್ಣಿನ ಅಂಶಗಳು ಇರುವುದರಿಂದ ಅವೆಲ್ಲ ಸಸ್ಯಗಳೂ ಆಳಕ್ಕೆ ಬೇರುಗಳನ್ನು ಇಳಿಸುತ್ತ ತ್ವರಿತವಾಗಿ ಮೇಲೇರುತ್ತವೆ. ಸೂರ್ಯನ ಬೆಳಕಿಗಾಗಿ ಪೈಪೋಟಿ ಇರುವುದರಿಂದ ಹಲಸು, ಮಾವು, ನಂದಿ, ಹೊನ್ನೆಯಂಥ ಸಸ್ಯಗಳೂ ನೇರವಾಗಿ ತ್ವರಿತವಾಗಿ ಮೇಲೇಳುತ್ತವೆ. ತಕ್ಷಣ ಮೇಲಕ್ಕೆ ಏಳದಂತೆ ಕಂಡರೂ ಚಿಂತೆಯಿಲ್ಲ. ಅವು ಆಳಕ್ಕೆ ಬೇರುಗಳನ್ನು ಇಳಿಸುತ್ತಿರುತ್ತವೆ. 
ಮೂರೇ ತಿಂಗಳಲ್ಲಿ ಒಂದು ಮೀಟರ್‌ಗಿಂತ ಆಳಕ್ಕೆ ಬೇರು ಇಳಿದಿರುತ್ತವೆ. ಮಣ್ಣು ಸಡಿಲ ಇರುವುದರಿಂದ ಅವಕ್ಕೆ ಉಸಿರಾಟವೂ ಸಲೀಸಾಗಿರುತ್ತದೆ. ಎಲ್ಲವೂ ಶೀಘ್ರ ಮೇಲೇಳುತ್ತವೆ. ಮೊದಲ ಮಳೆಗೇ ಅಣಬೆಗಳು ಏಳುವುದನ್ನು ಕಾಣುತ್ತೀರಿ. ಅದರ ಅರ್ಥ ಅಣಬೆಯ ಬೇರುಗಳ ಜಾಲ ನೆಲದಾಳದಲ್ಲಿ ಹಬ್ಬಿದೆ ಅಂತ. ಇನ್ನು ಚಿಂತೆ ಇಲ್ಲ.  ಮಳೆ ಸಾಕಷ್ಟು ಇಲ್ಲದಲ್ಲಿ ನೀರು ಕೊಡುತ್ತಿರಿ. ತರಗೆಲೆಗಳ ದಟ್ಟ ಮುಚ್ಚಿಗೆ ಇರಲಿ.  ಮೊದಲ ಎರಡು ಮೂರು ವರ್ಷ ಅಷ್ಟೆ. ಆಮೇಲೆ ಏನನ್ನೂ ಕೊಡಬೇಕಾಗಿಲ್ಲ.
ಮೊದಲ ಎರಡು ಮೂರು ವರ್ಷ ನೆಲಮಟ್ಟದಲ್ಲಿ ಸಾಕಷ್ಟು ಕಳೆ ಬೆಳೆಯಬಹುದು. ಆಗೆಲ್ಲ ಅವುಗಳನ್ನು ಕಿತ್ತು ಅಲ್ಲಲ್ಲೇ ಹರವುತ್ತಿರಿ. ಗಿಡಗಳು ಎತ್ತರಕ್ಕೆ ಬೆಳೆದು ದಟ್ಟ ನೆರಳು ಆವರಿಸುವುದರಿಂದ ಕಳೆಯ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತದೆ. ಪ್ರಾಣಿಪಕ್ಷಿಗಳು, ಕೀಟಪತಂಗಗಳು,  ಇರುವೆ ಗೆದ್ದಲುಗಳು, ಎರೆಹುಳುಗಳು ಅಲ್ಲಿಗೆ ಆಶ್ರಯಕ್ಕೆ ಬಂದು ಮುಂದೆ ಅವೇ ಅರಣ್ಯ ನಿರ್ವಹಣೆ ಮಾಡುತ್ತವೆ. 
ಸಹಜ ನಿಸರ್ಗದಲ್ಲಿ ನೂರು ವರ್ಷಗಳಲ್ಲಿ ಬೆಳೆಯುವ ಅರಣ್ಯವನ್ನು ನಮ್ಮ ಯತ್ನದಿಂದ ಹತ್ತೇ ವರ್ಷಗಳಲ್ಲಿ ನಿರ್ಮಿಸಬಹುದು. ಏನನ್ನೂ ಬೆಳೆಸಲಾಗದಂಥ ದಟ್ಟ ದುಸ್ಥಿತಿಯ ತಾಣದಲ್ಲೂ ಇಂಥ ಅರಣ್ಯವನ್ನು ಬೆಳೆಸಬಹುದು. 
ಮಣ್ಣಿನಲ್ಲಿ ಸತ್ವ ಏನೇನೂ ಇಲ್ಲದಿದ್ದರೂ ಕ್ರಮೇಣ ನೀವು ಇಟ್ಟ ಮುಚ್ಚಿಗೆಯಲ್ಲೇ ಸೂಕ್ಷ್ಮಾಣುಗಳು ಸಸ್ಯಗಳಿಗೆ ಪೋಷಣೆ ನೀಡುತ್ತವೆ. 
ಅರಣ್ಯ ಬೆಳೆದಂತೆಲ್ಲ ಎಲೆಗಳಿಂದ ಹೊಮ್ಮುವ ತೇವಾಂಶ ಆಕಾಶಕ್ಕೆ ಹೋಗುವುದಿಲ್ಲ. ಅಲ್ಲಲ್ಲೇ ತಂಪಿನ ವಾತಾವರಣದಲ್ಲಿ ಇಬ್ಬನಿ ರೂಪದಲ್ಲಿ ಬೀಳುತ್ತಿರುತ್ತದೆ. 
ಜಪಾನಿನ ಅಕಿರಾ ಮಿಯಾವಾಕಿ ಎಂಬ ಸಸ್ಯವಿಜ್ಞಾನಿ 1970ರಲ್ಲಿ ರೂಢಿಗೆ ತಂದ ಈ ವಿಧಾನ ಪೂರ್ವ ಏಷ್ಯದಲ್ಲಿ ತುಂಬ ಆಕರ್ಷಣೀಯವಾಗಿ ಬೆಳೆದವು. ಬೆಂಗಳೂರಿನ ಬಳಿ ಇರುವ ಟೊಯೊಟಾ ಕಿರ್ಲೊಸ್ಕರ್‌ ಕಂಪನಿಯ ಆವರಣದಲ್ಲಿ ಆತನ ಸಲಹೆಯ ಪ್ರಕಾರ ಮಾದರಿ ಅರಣ್ಯವನ್ನು ಬೆಳೆಸಲಾಯಿತು. ಆ ದಿನಗಳಲ್ಲಿ ಮಿಯಾವಾಕಿಯ ಸಹಾಯಕ್ಕೆಂದು ನಿಯುಕ್ತಿಗೊಂಡವರು  ಕಾರುಗಳ ಉತ್ಪಾದನೆಯಲ್ಲಿ ತೊಡಗಿದ್ದ ಶುಭೇಂದು ಶರ್ಮಾ.  ಅವರ ಕಣ್ಣೆದುರೇ ಎರಡೂವರೆ ಎಕರೆಯಲ್ಲಿ 30 ಸಾವಿರ ಗಿಡಗಳು ತಲೆ ಎತ್ತಿದವು (ನಾನಿದನ್ನು ಕಣ್ಣಾರೆ ನೋಡಿದ್ದೇನೆ).
ಶರ್ಮಾ ತನ್ನ ಎಂಜಿನಿಯರಿಂಗ್‌ ವೃತ್ತಿಯನ್ನು ತೊರೆದು ಈ ಬಗೆಯ ಅರಣ್ಯಗಳನ್ನು ಬೆಳೆಸಲೆಂದೇ ಪೂರ್ಣಾವಧಿ ಮೀಸಲಿಟ್ಟಿದ್ದಾರೆ. ಇಂದು ಭಾರತದ ಹತ್ತಾರು ನಗರಗಳಲ್ಲಿ ಮತ್ತು ಪಶ್ಚಿಮದ ಹತ್ತಾರು ರಾಷ್ಟ್ರಗಳಲ್ಲಿ ಶುಭೇಂದು ಶರ್ಮಾ ನಿರ್ಮಿಸಿದ ಮಿಯಾವಾಕಿ ಅರಣ್ಯಗಳು ತಲೆ ಎತ್ತಿವೆ.
ಅವರ ಅನೇಕ ಉಪನ್ಯಾಸಗಳು ಯೂಟ್ಯೂಬ್‌ನಲ್ಲಿ ನೋಡಸಿಗುತ್ತವೆ. ತುರ್ತಾಗಿ ಅರಣ್ಯ ಬೆಳೆಸುವ ಪ್ರಾಥಮಿಕ ಮಾಹಿತಿ ನೀಡುವ ಅವರ ಟೆಡ್‌ ಉಪನ್ಯಾಸದ ಲಿಂಕ್‌ ಇಲ್ಲಿದೆ: 
ನೋಡಿ.  ವಿಡಿಯೊದ ಕನ್ನಡದ ಡಬ್ಬಿಂಗ್‌ ಸಾಧ್ಯವಿದೆಯೊ ನೋಡಿ.   ಇತರರೊಂದಿಗೆ ಹಂಚಿಕೊಳ್ಳಿ. ವಿಶೇಷವಾಗಿ ಶಾಲಾ ಶಿಕ್ಷಕರು ಮಕ್ಕಳ ಜೊತೆ ಕೈಜೋಡಿಸಿ ಇಂಥ ಅರಣ್ಯಗಳನ್ನು ನಿರ್ಮಿಸಬಹುದು.  ನಾವು ಬಿಸಿಪ್ರಳಯದ ತುರ್ತು ಸ್ಥಿತಿಯ ಕಡೆ ಹೊರಳುತ್ತಿದ್ದೇವೆ. ಮಳೆಗಾಲ ಬರುವವರೆಗೆ ಕಾಯುತ್ತ ಕೂರಬೇಡಿ. ಈಗಲೇ ಬೀಜ ಸಂಗ್ರಹಣೆಗೆ, ಸೂಕ್ತ ಸಸ್ಯಗಳ ಪತ್ತೆಗೆ ತೊಡಗಿಕೊಳ್ಳಿ.



Thursday, 8 August 2024

ಅಪಾಯಕಾರಿ ಕೀಟನಾಶಕಗಳ ಬಳಕೆ... ?!






ಬರಹ: ಕೂಡಂಡ ರವಿ, ಹೊದ್ದೂರು. 

ಮೊ. 8310130887. 

 ಕೃಷಿಕರು ಅಧಿಕ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿ ಮಿತಿ ಮೀರಿದ ಕೀಟ ನಾಶಕಗಳನ್ನು ಬಳಸುತ್ತಿರುವರು. ಇವು ಜೀವಸಂಕುಲಕ್ಕೆ, ಮಾನವನಿಗೂ ಹಾನಿಕಾರಕವಾಗಿವೆ. ಮಾನವ ಜೀವವನ್ನು ಬಲಿ ಪಡೆಯುವದರ ಜೊತೆಗೆ, ಬಹುತೇಕ ಮಂದಿಯ ಸರಣಿ ಅನಾರೋಗ್ಯಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿವೆ. 

ಮಾರಾಟಗಾರರಿಗೆ ಆಮಿಷ !

ವಿದೇಶಗಳಲ್ಲಿ ಬಹಿಷ್ಕರಿಸಲಾದ ಕೀಟನಾಶಕಗಳನ್ನು ನಮ್ಮ ದೇಶದಲ್ಲಿ ಮನಸೋ ಇಚ್ಛೆ ಬಳಸಲಾಗುತ್ತಿದೆ. ವಿದೇಶಿ ಬಹುರಾಷ್ಟೀಯ ಕಂಪೆನಿಗಳು ಹತ್ತಾರು ಹೆಸರಿನಲ್ಲಿ ವಿಷವನ್ನು ಮಣ್ಣಿಗೆ ಸೇರಿಸಲು ಭಾರತೀಯ ರೈತರನ್ನು ಪ್ರೇರೇಪಿಸುತ್ತಿವೆ. ಇಲ್ಲಿನ ಮಾರಾಟಗಾರರು ಆಮಿಷಗಳಿಗೆ ಬಲಿ ಬಿದ್ದು ಇವುಗಳ ಅಪಾಯದ ಅರಿವಿದ್ದರೂ, ಮಾರಾಟ ಮಾಡುತ್ತಿರುವರು ! ಬೆಳೆಗಳಿಗೆ ಮಿತಿ ಮೀರಿ ಕೀಟನಾಶಕ, ರಾಸಾಯನಿಕ ಗೊಬ್ಬರ ಬಳಸಿದ್ದಲ್ಲಿ ಮಾನವನಿಗೆ “ಕ್ಯಾನ್ಸರ್” ಖಚಿತ. ಆದರೆ, ಈ ವಿಚಾರವನ್ನು ಬಹುತೇಕ ಮಾಧ್ಯಮಗಳು ಜನತೆಗಳು ತಿಳಿಸುತ್ತಿಲ್ಲ. ಮನೆಗಳಿಗೆ ಸಿಮೆಂಟ್ ಶೀಟ್ ಬಳಸಿದ್ದಲ್ಲಿ ಕ್ಯಾನ್ಸರ್ ಬರುವುದಂತೆ ! ಆದರೂ, ಇವುಗಳ ಮಾರಾಟ ನಿರಾಂತಕವಾಗಿ ನಡೆಯುತ್ತಿದೆ. 

ಮಿತಿಮೀರಿದ ವಿಷ !

ಮಿತಿ ಮೀರಿದ ಕೀಟನಾಶಕಗಳ ಬಳಕೆಯಿಂದ ಪಂಜಾಬ್‌ನಲ್ಲಿ ಸಾವಿರಾರು ರೈತರು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ. ಅದೇ ರೀತಿ  ಎರಡು ದಶಕಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯ ಪಟ್ರಮೆಯಲ್ಲಿ ಗೇರು ತೋಟಗಳಿಗೆ  ಹೆಲಿಕಾಪ್ಟರ್ ಮೂಲಕ ಎಂಡೋಸಲ್ಪಾನ್ ವಿಷ ಸಿಂಪಡಣೆಯ ಪರಿಣಾಮ ಸಾವಿರಾರು ಮಂದಿ ಭೀಕರ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಕೊಡಗಿನಲ್ಲಿಯೂ ಶುಂಠಿ ಸೇರಿದಂತೆ ವಿವಿಧ ಬೆಳೆಗಳಿಗೆ ಮಿತಿ ಮೀರಿ ವಿಷವನ್ನು ಸಿಂಪಡಿಸಲಾಗುತ್ತದೆ ! ಸೊಪ್ಪು ತರಕಾರಿಗಳಿಗೂ ಅತಿಯಾಗಿ ಕ್ರಿಮಿನಾಶಕ, ರಾಸಯನಿಕ ಗೊಬ್ಬರ ಬಳಕೆಯಾಗುತ್ತಿದೆ. ಒಂದು ಏಕರೆಯಲ್ಲಿ  ಟೊಮೊಟೋ ಬೆಳೆ ಬೆಳೆಯಲು ಒಂದು ಫಸಲಿಗೆ ಸುಮಾರು 30 ಸಾವಿರ ರೂಪಾಯಿಗಳ ಕ್ರಿಮಿನಾಶಕಗಳನ್ನು ಬಳಸಲಾಗುತ್ತದೆ. ದಾಳಿಂಬೆ ಬೆಳೆಯಲ್ಲಿ ಸಹಾ ಧಾರಾಳ ಕ್ರಿಮಿನಾಶಕಗಳ ಬಳಕೆಯಾಗುತ್ತಿದೆ. ಜನತೆಯ ಪ್ರಾಣಕ್ಕೆ ಸಂಚಕಾರ ತರುವಂತಹ ವಿಷದ ಮಾರಾಟ, ಬಳಕೆಗೆ ಸರಕಾರಗಳು ಏಕೆ ಕಡಿವಾಣ ಹಾಕುತ್ತಿಲ್ಲ. ಅದರ ಉತ್ಪಾದನೆಗೆ ಏಕೆ ಮುಂದಾಗುತ್ತಿಲ್ಲ. ಬಹುಶ್ಯ ಕಂಪೆನಿಗಳು ಆಮಿಷಗಳಿಗೆ ಸರಕಾರ, ಜನತೆ ಬಲಿ ಪಶುವಾಗುತ್ತಿರುವರೋ ? 

 ಸರಕಾರದ ವರದಿ

ಮಹಾರಾಷ್ಟçದ ಒಣಭೂಮಿ ಪ್ರದೇಶವಾದ ವಿದರ್ಭದಲ್ಲಿ ರೈತರ ಸಾವು- ಆತ್ಮಹತ್ಯೆಗಳಿಗೆ ಕೊನೆಯೇ ಇಲ್ಲ ಎಂಬAತಾಗಿದೆ. ಅಲ್ಲಿ 2001 ರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2017ರ ನಂತರ ರಾಸಾಯನಿಕ ಕೀಟನಾಶಕಗಳ ವಿಷದಿಂದಾಗಿ ಸುಮಾರು 35ಕ್ಕೂ ಅಧಿಕ ರೈತರು-ಕೃಷಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ರಾಸಾಯನಿಕ ಸಿಂಪಡಣೆ ಸಮಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ. ಪರಿಣಾಮ  ಇವರ ಶ್ವಾಸಕೋಶಗಳಿಗೆ ವಿಷ ನುಗ್ಗಿ ಬಹುತೇಕ ಸಾವು ಸಂಭವಿಸಿವೆ. ಸಾವಿಗೆ ಮೊನೋಕ್ರೊಟೋಫಾಸ್, ಆಕ್ಸಿಡೆಮೆಟೊನ್–ಮಿಥೈಲ್, ಅಸೆಫೇಟ್, ಪ್ರೊಫೆನೊಫೋಸ್, ಫ್ರಿಪ್ರೊನಿಲ್, ಇಮಿಡಾಕ್ಲೊಫ್ರಿಡ್ ಮತ್ತು ಸೈಪಮ್ರೆಥಿನ್ ಮುಂತಾದ ಕೀಟನಾಶಕಗಳೆ ಕಾರಣವೆಂದು ಸರಕಾರ ಸಿದ್ಧಪಡಿಸಿದ ಸತ್ಯಶೋಧನಾ ವರದಿಗಳು ಉಲ್ಲೇಖಿಸಿವೆ. ಇದರ ಪರಿಣಾಮ ಕೆಲವು ಔಷಧಿಗಳ ಬಳಕೆಯನ್ನು ಅಲ್ಲಿನ ಸರಕಾರ ತಾತ್ಕಲಿಕವಾಗಿ ನಿಷೇಧಿಸಿತ್ತು. ಕೇಂದ್ರ ಸರಕಾರವು “ವಿದರ್ಭ” ಪ್ಯಾಕೇಜ್ ಅನ್ನು ಫೋಷಿಸಿತ್ತು. ಆದರೆ, ಅಪಾಯಕಾರಿ ಪೀಡೆನಾಶಕಗಳನ್ನು ಖಾಯಂ ಆಗಿ ನಿಷೇಧಿಸುವ ಚಿಂತನೆಯನ್ನು ಸರಕಾರಗಳು ಇನ್ನೂ ಮಾಡದೇ ಇರುವುದು ವಿಪರ್ಯಾಸ. 

ಮಾರಕ ವಿಷಗಳ ನಿಷೇಧ ? 

ಯೂರೋಪಿಯನ್ ಯೂನಿಯನ್ ಸೇರಿದಂತೆ ವಿವಿಧ ರಾಷ್ಟçಗಳಲ್ಲಿ ನಿಷೇಧಿತವಾದ ಕ್ರಿಮಿನಾಶಕಗಳು ನಮ್ಮಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೇಂದ್ರ ಕೃಷಿ ಮತ್ತು ಕೃಷಿಕ ಕಲ್ಯಾಣ ಮಂತ್ರಾಲಯದ ಅಂಗಸAಸ್ಥೆಯ ಮಾಹಿತಿಯನ್ವಯ 2015-16ರಲ್ಲಿ ಬಳಕೆಯಾದ ಒಟ್ಟು 7, 717 ಟನ್ ಕೀಟನಾಶಕಗಳಲ್ಲಿ ಶೇ. 30ರಷ್ಟು (2, 254 ಟನ್) ಮಾರಕವಾದ ಕ್ಲಾಸ್-1 ವಿಷಕಾರಿ ಕೀಟನಾಶಕಗಳಾಗಿವೆ !

2003ರಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರೊಪೆಸರ್ ಅನುಪಮಾ ವರ್ಮ ಅಧ್ಯಕ್ಷರಾಗಿದ್ದ ಪರಿಣಿತರ ಸಮಿತಿಯನ್ನು ಕೇಂದ್ರ ಸರಕಾರ ನೇಮಿಸಿತ್ತು. ಆದರ ವರದಿಯನುಸಾರ 2018ರ-21ರ ಅವಧಿಯಲ್ಲಿ ಏಳು ಭಾರೀ ವಿಷ ಹೊಂದಿರುವ ಕೀಟನಾಶಕಗಳನ್ನು ನಿಷೇಧಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಆದರೆ, ಇದರಲ್ಲಿ ಮಹಾರಾಷ್ಟçದಲ್ಲಿ ರೈತರನ್ನು ಬಲಿ ಪಡೆದ ಎರಡು ಘೋರ ಕ್ರಿಮಿನಾಶಕಗಳು ಸೇರಿಲ್ಲ ? ಪ್ರತೀ ವರ್ಷ ಭಾರತದಲ್ಲಿ ಸುಮಾರು 10 ಸಾವಿರ ಪೀಡೆನಾಶಕಗಳ ವಿಷಬಾಧೆಯ ಪ್ರಕರಣಗಳು ವರದಿಯಾಗುತ್ತಿವೆ. 

ಮಾಹಿತಿಯೇ ಇಲ್ಲದ ಕೃಷಿಕ ಸಮುದಾಯ !

ಹಲವಾರು ರೈತಾಪಿ ವರ್ಗದವರಿಗೆ ಯಾವ ಬೆಳೆೆಗಳಿಗೆ ಯಾವ ಯಾವ ಕಾಯಿಲೆ ಬರುತ್ತದೆ. ಅವುಗಳ ನಿಯಂತ್ರಣಕ್ಕೆ ಯಾವ ಔಷಧ ಸಿಂಪಡಣೆ ಮಾಡಬೇಕು ಎಂಬ ಕನಿಷ್ಠ ಜ್ಞಾನವೇ ಇಲ್ಲ. ಹಲವರು ಔಷಧಿ ಅಂಗಡಿಯ ಸಿಬ್ಬಂದಿ ಅಥವಾ ಮಾಲೀಕರನ್ನು ಈ ಬಗ್ಗೆ ವಿಚಾರಿಸುವರು. ಅವರು ಹೇಳಿದ ಔಷಧಿಗಳನ್ನು ದುಬಾರಿ ಬೆಲೆ ತೆತ್ತು ಕೊಳ್ಳುವುದು ಸಾಮಾನ್ಯ ಸಂಗತಿ. ಇಂತಹ ಸಮಸ್ಯೆಗಳು ಎದುರಾದಾಗ ಸಮೀಪದ ತೋಟಗಾರಿಕೆ ಅಥವಾ ಕೃಷಿ ಇಲಾಖಾಧಿಕಾರಿಗಳನ್ನು ಸಂಪರ್ಕಿಸುವುದು ಉತ್ತಮ. ಇಲ್ಲವೆ, ಸಮೀಪದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸುವುದು ಅತ್ಯುತ್ತಮ. ಬಹುತೇಕ ಔಷಧಿ ಮಾರಾಟ ಮಳಿಗೆಯವರಿಗೆ ಔಷಧಿಯ ಬಗ್ಗೆ ಕನಿಷ್ಠ ಜ್ಞಾನವೂ ಇರುವುದಿಲ್ಲ ಎಂಬ ಸಾಮಾನ್ಯ ವಿಚಾರವು ನಮ್ಮ ಕೃಷಿಕ ಸಮುದಾಯಕ್ಕೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕೃಷಿಕ ಸಮುದಾಯದವರ ಅಲ್ಪಜ್ಞಾನವನ್ನೇ ದಾಳವನ್ನಾಗಿ ಬಳಸಿಕೊಂಡು ಸ್ವದೇಶಿ ಮತ್ತು ವಿದೇಶಿ ಕಂಪನಿಗಳು ಕೃಷಿಕ ಸಮುದಾಯವನ್ನು ಸುಲಿಗೆ ಮಾಡುತ್ತಿವೆ. ಮಣ್ಣಿಗೆ ಮನಬಂದAತೆ ವಿಷ ಸುರಿಯಲು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿವೆ. ಇದರಿಂದ ಬಳಕೆದಾರರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. 

ಮುಂಜಾಗರೂಕತೆಯ ಕೊರತೆ ? 

ನಮ್ಮ ದೇಶದ ಬಹುಪಾಲು ರೈತರು, ಕೃಷಿ ಕಾರ್ಮಿಕರು ಕ್ರಿಮಿನಾಶಕಗಳ ಬಳಕೆಯ ಸಂದರ್ಭ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಸುರಕ್ಷತೆಯ ಬಳಕೆಯೇ ಬಹುಪಾಲು ಸಾವಿಗೆ ಮೂಲ ಕಾರಣವೆಂದು ಕೇಂದ್ರ ಮಂತ್ರಾಲಯ ಮತ್ತು ರಾಜ್ಯಕೃಷಿ ಇಲಾಖೆಗಳೇ ಕಾರಣವೆಂದು ದೆಹಲಿಯ ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಾರ‍್ಮೆಂಟ್ ಉಪ ಮಹಾ ನಿರ್ದೇಶಕ ಚಂದ್ರಭೂಷಣ್ ಆಭಿಪ್ರಾಯಿಸುತ್ತಾರೆ. ಬಹುಪಾಲು ರೈತರಿಗೆ, ಕಾರ್ಮಿಕ ವರ್ಗದವರಿಗೆ ಅವರ ಕುಟುಂಬದವರಿಗೆ ಪೀಡೆನಾಶಕಗಳ ಬಳಕೆಯ ಅಪಾಯಗಳ ಅರಿವಿಲ್ಲ. ಈ ಬಗ್ಗೆ ಸರಕಾರಿ ಇಲಾಖೆಗಳು, ಖಾಸಗಿ ಸ್ವಯಂಸೇವಾ ಸಂಸ್ಥೆಗಳು ಮಾಹಿತಿ ನೀಡುತ್ತಿಲ್ಲ. ಬಹುತೇಕ ಮಾಧ್ಯಮಗಳು ಇವುಗಳ ಬಗ್ಗೆ ಮೌನವಹಿಸಿವೆ. ವಿವೇಚನಾ ರಹಿತವಾಗಿ ಘೋರ ವಿಷವನ್ನು ಬಳಸುವುದರಿಂದ ಇದರ ಬಳಕೆದಾರರು ಸುಲಭವಾಗಿ ಇವಕ್ಕೆ ಬಲಿಯಾಗುತ್ತಿದ್ದಾರೆ. 

 ನಮ್ಮಲ್ಲಿ ಸಾವಿರಾರು ಕೃಷಿಯ ಮುಖಮುದ್ರೆಯುಳ್ಳ ವೆಬ್‌ಗಳು, ಕೃಷಿ ಸಂಬAಧಿತ ಪತ್ರಿಕೆಗಳು, ಸ್ವಯಂಸೇವಾ ಸಂಸ್ಥೆಗಳಿವೆ. ರೈತ ಪರ ಸಂಘಟನೆಗಳಿವೆ. ಅದರೂ, ಯಾರೂ ಈ ಬಗ್ಗೆ ಅಪಾಯಕಾರಿ ಔಷಧಿಗಳ ಬಗ್ಗೆ ಚಕಾರವೆತ್ತದಿರುವುದು ನಮ್ಮ ದುರಂತ. 

 ಇವುಗಳ ಅಪಾಯಗಳ ಬಗ್ಗೆ ಅರಿತು ರೈತ ಸೇವಾ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮಾಹಿತಿ ನೀಡಿದ್ದಲ್ಲಿ ಸಾವಿನ ಸಂಖ್ಯೆ ಕೊಂಚ ಇಳಿದೀತು. ಸರಕಾರ ಘೋರ ವಿಷಗಳನ್ನು ನಿಷೇಧಿಸುವ ಮುನ್ನಾ ರೈತರೇ ಇವುಗಳನ್ನು ನಿಷೇಧಿಸಬೇಕಿದೆ. ಇಲ್ಲವಾದಲ್ಲಿ ಭಾರತೀಯ ರೈತರಿಗೆ ಹೆಚ್ಚು ದಿನ ಆರೋಗ್ಯವಂತರಾಗಿ ಬಾಳಲಾರರು .

ಇದಕ್ಕೆಲ್ಲ ಪರಿಹಾರ ದೇಸಿ ಗೋವಾಆದರಿತ ನೈಸರ್ಗಿಕ ಕೃಷಿ

                              --------

Monday, 29 July 2024

ಸಾವಯವ ರಹಿತ ಮಣ್ಣು ಸತ್ವಹೀನ !

ಬರಹ: ಕೂಡಂಡ ರವಿ, ಹೊದ್ದೂರು. 

ಮೊ; ೮೩೧೦೧೩೦೮೮೭. 



ನಮ್ಮಲ್ಲಿ ಹಲವಾರು ವಿಧದ ಮಣ್ಣುಗಳಿವೆ. ಇವುಗಳನ್ನು ಅದರ ಬಣ್ಣ, ಫಲವತ್ತತೆಗೆ ಅನುಗುಣವಾಗಿ ವರ್ಗಿಕರಿಸಲಾಗಿದೆ. ಬೇಸಾಯದಲ್ಲಿ ಮಣ್ಣಿನ ಫಲವತ್ತತೆಗೆ ಅಧಿಕ ಮಹತ್ವವಿದೆ. ಆದರೆ, ರೈತರು ಮಣ್ಣಿನ ವಿಚಾರ ಅರಿಯದೇ ಮನಬಂದಂತೆ ರಾಸಾಯನಿಕ ಗೊಬ್ಬರ, ಪೀಡೆನಾಶಕ, ಕಳೆ ನಾಶಕ ಬಳಸಿ ಅದರ ಫಲವತ್ತತೆಯನ್ನು ನಾಶ ಮಾಡುತ್ತಿರುವರು. ನೈಸರ್ಗಿಕ ವಿಪತ್ತುಗಳು ಸಹಾ ಮಣ್ಣಿನ ಸಾರವನ್ನು ಕಡಿಮೆ-ಹೆಚ್ಚು ಮಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. 

 ಮಣ್ಣು ಸತ್ವಯುತವಾಗಿರಲು ಅದರಲ್ಲಿರುವ “ಸಾವಯವ ಅಂಶ”ಗಳೇ ಮೂಲ ಕಾರಣ. ಈ ಅಂಶವು ಎಂತಹಾ ಸಮಸ್ಯೆಯಾತ್ಮಕ ಮಣ್ಣನ್ನು ಫಲಭರಿತವನ್ನಾಗಿಸುತ್ತದೆ. ಸಾವಯವ ವಸ್ತುಗಳು ನಮ್ಮ ಹೊಲ, ಗದ್ದೆ, ತೋಟಗಳನ್ನು ಸುಂದರವಾಗಿಸಲು ಸಹಕರಿಸುತ್ತದೆ. ಅಂತಹ ಮಾಂತ್ರಿಕ ಶಕ್ತಿ ಅದಕ್ಕಿದೆ. ಮಣ್ಣಿಗೆ ಪೂರಕವಾಗಿ ಬೆರೆಯುವಂತಹ-ಮಣ್ಣಿನಲ್ಲಿ ಕರಗುವಂತಹ ಸಸ್ಯ-ಪ್ರಾಣಿಜನ್ಯ ವಸ್ತುಗಳಿಂದ ಇವು ಲಭ್ಯ. 

ನೈಸರ್ಗಿಕ ಸ್ಪಂಜ್ !

ಮರಳು ಕಣಗಳನ್ನು ಹೆಚ್ಚಾಗಿ ಹೊಂದಿರುವ ಮರಳು ಮಣ್ಣು ಕೃಷಿಗೆ ಸವಾಲು. ಮರಳು ಕಣಗಳು ಸಾಕಷ್ಟು ದೊಡ್ಡದಾಗಿರುತ್ತವೆ. ಇವುಗಳ ಮದ್ಯೆ ಸಾಕಷ್ಟು ಅಂತರವಿರುವಿರುವುದರಿಂದ ಅದರಲ್ಲಿ ನೀರು ವೇಗವಾಗಿ, ಸಲೀಸಾಗಿ ಹರಿದು ಹೋಗುತ್ತದೆ. ನೀರಿನ ಅಂಶ ಅದರಲ್ಲಿ ಕಡಿಮೆ ಕಡಿಮೆ ಇರುವ ಕಾರಣ ಅಂತಹ ಮಣ್ಣು ಬಲು ಬೇಗನೇ ಗಟ್ಟಿಯಾಗುತ್ತದೆ. ಇವುಗಳು ನೀರನ್ನು ಹಿಡಿದಿಟ್ಟು ಕೊಳ್ಳಲಾರವು. ಪರಿಣಾಮ ಇಂತಹ ಮಣ್ಣಿಗೆ ಪದೇ ಪದೇ ನೀರನ್ನು ನೀಡಬೇಕಾಗುತ್ತದೆ. ಮರಳು ಮಣ್ಣಿಗೆ ಸಾವಯುವ ಅಂಶವನ್ನು ಹಾಕಿದಾಗ ಅವು ನೀರನ್ನು ಹಿಡಿದಿಟ್ಟು ಕೊಂಡು ಗಿಡಗಳಿಗೆ ಪೂರೈಸುತ್ತದೆ. ಅದು ನೈಸರ್ಗಿಕ ಸ್ಪಂಜಿನಂತೆ ಕೆಲಸ ಮಾಡುತ್ತದೆ. ಇವು ಬೇಸಿಗೆ ಮತ್ತು ಬರಗಾಲದಲ್ಲಿ ಗಿಡಗಳಿಗೆ ನೀರನ್ನು ಒದಗಿಸಲು ಸಹಕಾರಿ. ಇದರಿಂದ ಗಿಡಗಳಿಗೆ ಬಗೆಬಗೆಯ ಪೋಷಕಾಂಶಗಳು ವರ್ಷದ ಎಲ್ಲಾ ಅವಧಿಯಲ್ಲಿ ಲಭ್ಯವಾಗುವಂತೆ ಮಾಡುತ್ತವೆ. ಮಣ್ಣಿನಲ್ಲಿ ಕರಗುವ ಸಾವಯವ ವಸ್ತುಗಳು ಪರಸ್ಪರ ಬೆರೆಯುತ್ತಾ ಮಣ್ಣು ಸವಕಳಿಯಾಗುವುದನ್ನು ನಿಯಂತ್ರಿಸುತ್ತವೆ. ಇಲ್ಲ ತಪ್ಪಿಸುತ್ತವೆ. 

 ನೆರಳು ಅನಗತ್ಯ

ಜೇಡಿ ಮಣ್ಣಿನಲ್ಲಿ ಕಣಗಳು ಸಾಕಷ್ಟು ಒತ್ತಗಿರುತ್ತವೆ. ಇವುಗಳು ಒಂದಕ್ಕೊಂದು ಬೆರೆತಿರುತ್ತವೆ. ಆದರೆ, ಇವುಗಳ ನಡುವೆ ಗಾಳಿಯಾಡುವುದು ಕಷ್ಟ. ಇಂತಹ ಮಣ್ಣಿಗೆ ಸಾವಯುವ ವಸ್ತುಗಳನ್ನು ಬೆರೆಸಿದಾಗ ಆ ಮಣ್ಣಿನಲ್ಲಿ ಸಲೀಸಾಗಿ ಗಾಳಿಯಾಡುತ್ತವೆ. ಬೇರುಗಳಿಗೆ ಧಾರಾಳವಾಗಿ ಗಾಳಿ ಲಭ್ಯವಾಗಿ ಸಸ್ಯಗಳು ಚೆನ್ನಾಗಿ ಬೆಳೆಯಲು ಅನುವಾಗುತ್ತದೆ. ಸಾವಯವ ವಸ್ತು ಮಣ್ಣಿನಲ್ಲಿ ಬೆರೆಯುವುದರಿಂದ ಮಣ್ಣಿನ ಕಣ-ಕಣಗಳ ಮಧ್ಯೆ ಜಾಗ ದೊರೆಯುತ್ತದೆ. ಇದರ ಮೂಲಕ ಗಿಡಗಳ ಬೇರುಗಳು ಸುಲಭವಾಗಿ ಬೆಳೆದು ಆಳಕ್ಕೆ ಇಳಿಯುತ್ತವೆ. ಪರಿಣಾಮ ಮಣ್ಣು ಬೇಗನೆ ಗಟ್ಟಿಯಾಗುವುದು ತಪ್ಪುತ್ತದೆ. ಈ ವಿಚಾರವನ್ನು ಅರಿತ ನಮ್ಮ ಹಿರಿಯರು ಭೂಮಿಗೆ ಸಾವಯುವ ಗೊಬ್ಬರವನ್ನು(ಕೊಟ್ಟಿಗೆ ಗೊಬ್ಬರ) ಧಾರಾಳವಾಗಿ ಬಳಸುತ್ತಿದ್ದರು. ಅದರ ಪರಿಣಾಮ ಆ ಕಾಲದಲ್ಲಿ ಧಾರಾಳ ಫಸಲು ದೊರೆಯುತ್ತಿತ್ತು. ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಮಣ್ಣು ನೀರನ್ನು ಹಿಡಿದಿಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಪರಿಣಾಮ ಬೇಸಿಗೆಯಲ್ಲಿ ಗಿಡಗಳು ಬಾಡಿ ಸಾಯುತ್ತದೆ. ಸಾವಯುವ ಗೊಬ್ಬರವನ್ನು ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಗಿಡಗಳಿಗೆ ನೆರಳು ಕೊಡುವ ಅಗತ್ಯವಿಲ್ಲ !

ಮರಗಳು ಅತ್ಯಗತ್ಯ 

 ಮಣ್ಣಿನಲ್ಲಿ ಸಾವಯವ ಅಂಶಗಳು ಬೆರೆತಾಗ, ಮಣ್ಣಿನ ಕಣ-ಕಣಗಳನ್ನು ಬೇರ್ಪಡಿಸುತ್ತವೆ. ಮಣ್ಣಿಗೆ ಉಪಯುಕ್ತ ಜೀವಾಣುಗಳಾದ ಎರೆಹುಳಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದಕ್ಕಾಗಿ ತೋಟಗಳಲ್ಲಿ ಅಧಿಕ ಮರಗಳಿರುವುದು ಅಗತ್ಯ. ಈ ಮರಗಳಿಂದ ಉದುರುವ ಎಲೆಗಳಿಂದ ಸಾವಯುವ ಗೊಬ್ಬರವು ಗಿಡಗಳಿಗೆ ದೊರೆಯತ್ತದೆ. ಎರೆಹುಳಗಳ ಚಟುವಟಿಕೆ ಹೆಚ್ಚಾದಷ್ಟು ಮಣ್ಣು ಸಡಿಲವಾಗುತ್ತದೆ. ಎರೆಹುಳಗಳು ಮಣ್ಣಿನಲ್ಲಿ ರಂಧ್ರಗಳನ್ನು ಮಾಡುವುದರಿಂದ ಆ ಮೂಲಕ ನೀರು ಭೂಮಿಯೊಳಕ್ಕೆ ಸುಲಭವಾಗಿ ಸೇರುತ್ತದೆ. ಇದು ಭೂಮಿಗೆ ಬಿದ್ದ ಎಲೆಗಳ ಕೊಳೆಯುವಿಕೆಗೆ ಸಹಕಾರಿ. ಇವುಗಳು ಮಣ್ಣಿನಲ್ಲಿ ಸೂಕ್ಮಾಣು ಜೀವಿಗಳ ಸೃಷ್ಟಿಗೆ ನೆರವಾಗುತ್ತದೆ. ಇವುಗಳು ಸಸ್ಯಗಳಿಗೆ ಬೇಕಾಗುವ  ಎಲ್ಲಾ ಬಗೆಯ ಪೋಷಕಾಂಶಗಳನ್ನು ನೀಡುತ್ತವೆ.

ಸಾವಯವ ಗೊಬ್ಬರದಿಂದ ಲಾಭ

  ಆದರೆ, ರಾಸಾಯನಿಕ ಗೊಬ್ಬರಗಳು ಕೇವಲ ನಿಗದಿತ ಪೋಷಕಾಂಶಗಳನ್ನು ಮಾತ್ರ ನೀಡುತ್ತವೆ. ಇಂತಹ ಜೀವಿಗಳು ಮಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ. ಇವು ಹಲವಾರು ಸಸ್ಯ ರೋಗಗಳನ್ನು ನಿಯಂತ್ರಿಸುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ. ಪರಿಣಾಮ ನಮ್ಮ ತೋಟದ ಸಸ್ಯಗಳು ಆರೋಗ್ಯಯುತವಾಗಿ ಬೆಳೆಯುತ್ತವೆ. ಇದರಿಂದ ಸರಾಸರಿ ಫಸಲು ನಿರೀಕ್ಷಿಸಿಸುವ ಎಲ್ಲಾ ಬೆಳೆಗಾರರು ಎಲ್ಲಾ ಬೆಳೆಗಳಿಗೂ, ಎಲ್ಲಾ ಕಾಲಕ್ಕೂ ಸಾವಯವ ಗೊಬ್ಬರಗಳನ್ನೇ ಬಳಸಬೇಕು. ಎಲ್ಲರೂ ಸಾವಯವ ಗೊಬ್ಬರ ಬಳಸುವುದನ್ನು ಪ್ರೋತ್ಸಾಹಿಸಬೇಕು. ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಕೃಷಿ ಲಾಭದಾಯಕವಾದೀತು. 

Sunday, 14 July 2024

ನನ್ನ ಬಾಲ್ಯ ಮತ್ತು ಕೃಷಿ ಜೀವನ

 ಷಣ್ಮುಖ ಕಟ್ಟ

ಅಗ್ರಿಕಲ್ಚರ್ ಡೆಸ್ಕ್ 





ನನ್ನ ಬಾಲ್ಯ ಜೀವನ ತುಂಬಾ ಕಠಿಣವಾಗಿತ್ತು.ನಾನು ಬಡ ಕುಟುಂಬದಿಂದ ಬಂದವನು .ನನ್ನದು ಕಡಬದ ಬಲ್ಪಗ್ರಾಮದ ಕಟ್ಟ ಎಂಬಲ್ಲಿ ಬರುತ್ತದೆ. ನನಗೆ ಆಹಾರ ಬೆಳೆಯಲ್ಲಿ ಆಸಕ್ತಿ ಹುಟ್ಟಲು ತಂದೆ ಮಾಡುತಿದ್ದ ತರಕಾರಿ ಕೃಷಿಯೇ ಕಾರಣ. ತಂದೆ ಮುಖ್ಯವಾಗಿ ಚಳಿಗಾಲ ಮತ್ತು ಮಳೆಗಾಲದಲ್ಲಿ ತರಕಾರಿ ಕೃಷಿ ಮಾಡುತ್ತಿದ್ದರು . ತಂದೆ ಮುಖ್ಯವಾಗಿ 1970 ರಿಂದ ತರಕಾರಿ ಕೃಷಿ ಮಾಡುತ್ತಿದ್ದರು .ಮುಖ್ಯ ವಾಗಿ ಬದನೆ ಒಂದೇ 4000  ಕೆಜಿ ಆಗುತಿತ್ತು . ಆವಾಗ ಬದನೆ ಕೆಜಿ ಗೆ ಇದ್ದದ್ದು 5 ರುಪಾಯೀ .ಆಕಾಲದಲ್ಲಿ ನಮ್ಮ ಊರಲ್ಲಿ ಮುಖ್ಯ ವಾಗಿ ತರಕಾರಿ ಕೃಷಿ ಮಾಡುತಿದ್ದದು ತಂದೆಯೆ.ತಂದೆ ಮುಖ್ಯವಾಗಿ ಮಳೆಗಾಲದಲ್ಲಿ ಅಲಸಂಡೆ, ಹಾಗಲಕಾಯಿ , ಹೀರೆಕಾಯಿ ,ಮುಳ್ಳುಸೌತೆ ಮಾಡುತ್ತಿದ್ದರು .ನಾನು ಕೂಡ ಶಾಲೆಗೆ ಹೋಗುತ್ತಾ ತಂದೆಗೆ ತರಕಾರಿ ಕೃಷಿಯಲ್ಲಿ ಸಹಕರಿಸುತಿದ್ದೆನು .ತಂದೆ ಮುಖ್ಯ ವಾಗಿ ಕೆಮಿಕಲ್ ಮತ್ತು ಸಾವಯವ ಕೃಷಿ ಮಾಡುತಿದ್ದರು .ತಂದೆ ಬೆಳಿಗ್ಗೆ ತರಕಾರಿ ಕೊಯಿವ ಸಮಯದಲ್ಲಿ ಸಹಕರಿಸುತಿದ್ದೆನು .ಬೆಳಿಗ್ಗೆ ಚಳಿಗೆ ತರಕಾರಿ ಕೊಯ್ಯವುದು ಎಂದರೆ ಮಜವೇ ಬೇರೆ .ತಂದೆ ಮುಖ್ಯವಾಗಿ ಚಳಿಗಾಲದ ಕೃಷಿಯಲ್ಲಿ ಬದನೆ ,ಸಾಂಬಾರು ಸೌತೆ ಮಾಡುತಿದ್ದರು .ನಮ್ಮ ಬದನೆ ಎಂದರೆ ಎಲ್ಲಕಡೆ ಫೇಮಸ್ .ತರಕಾರಿಗೆ ಸೊಪ್ಪು ,ಹಟ್ಟಿಗೊಬ್ಬರ ,ನೀರು ಹಾಯಿಸಲು ನಾವು ಮಕ್ಕಳು ಸಹಕರಿಸುತಿದ್ದೆವು .ಚಳಿಗಾಲದ ಕೃಷಿಯಲ್ಲಿ ತಂದೆಒಟ್ಟಿಗೆ ಪಾಲ್ಗೊಳುದೆಂದರೆ ಎಲ್ಲಿಲ್ಲದ ಖುಷಿ .ಮರುದಿವಸ ತರಕಾರಿ ಕೊಯ್ಯವುದೆಂದರೆ ಹಿಂದಿನ ದಿನದಿಂದಲೇ ಖುಷಿ .ಬೆಳಿಗ್ಗೆ ಬೇಗ ಎದ್ದು ಚಳಿಗೆ ತರಕಾರಿ ಕೊಯ್ಯಲು ರೆಡಿ ಆಗುತಿದ್ದೆನು .ತಂದೆ ತರಕಾರಿ ಕೊಯ್ಯತಾ ಸಾಲಲ್ಲಿ ಇಡುತ್ತಾ ಹೋಗುತಿದ್ದರು ,ನಾನು ಹಿಂದಿನಿಂದ ತರಕಾರಿ ಕೈಯಲ್ಲಿ ಹೆಕ್ಕಿ ಬುಟ್ಟಿಗೆ ಹಾಕುತ್ತಾ ಬರುತಿದ್ದೆನು.ತರಕಾರಿ ತುಂಬಾ ಸಿಕ್ಕಿದರೆ ನನಗೆ ಖುಷಿಯೇ ಖುಷಿ . ಮತ್ತೆ ತಂದೆಯ ತರಕಾರಿ ಕೃಷಿಯೊಟ್ಟಿಗೆ ನನ್ನದು ಒಂದು ತರಕಾರಿ ಸಾಲು .ಅದನ್ನು ನಾನೆ ನೋಡಿಕೊಳ್ಳುತಿದ್ದದು . ಅದರಲ್ಲಿ ಬಂದ ಹಣ ನನಗೆಯೇ .ತಂದೆ ಒಟ್ಟಿಗೆ  ಪೇಟೆಗೆ ತರಕಾರಿ ತಲೆಯಲ್ಲಿ 4 ಕಿಲೋಮೀಟರು ದೂರದ ಬಲ್ಪ ಕ್ಕೆ ಹೊತ್ತುಕೊಂಡು ಹೋಗುತಿದ್ದೆನು .ಶಾಲೆಗೆ ಹೋಗುವಾಗ ತಂದೆ ಪೇಟೆಗೆ ತರಕಾರಿ ,ಹಾಲು ನನ್ನೊಟ್ಟಿಗೆ ಕಳುಹಿಸುತ್ತಿದ್ದರು .ಶಾಲೆಯಲ್ಲಿ ಸಹಪಾಠಿಗಳು ನನ್ನನ್ನು ತಮಾಷೆಗೆ ಬದನೆ ಎಂದು ಕರೆಯುತಿದ್ದರು .ತಂದೆ ಒಟ್ಟಿಗೆ ವಾಹನದಲ್ಲಿ ತರಕಾರಿ ತೆಗೆದು ಕೊಂಡು ಹೋಗುವಾಗ ನಾನು ಹೋಗುತಿದ್ದೆನು . ತರಕಾರಿ ಮಾರಾಟ ಮಾಡಿದ ಲೆಕ್ಕವನ್ನು ಪುಸ್ತಕದಲ್ಲಿ ಬರೆದು ಇಡುತಿದ್ದದ್ದು ನಾನೆ .puc ಗೆ ಹೋಗುವ ಸಂದರ್ಭ ದಲ್ಲಿ ತರಕಾರಿಯಲ್ಲಿ ಪ್ರಯೋಗ ಮಾಡುತಿದ್ದೆನು . ವಿಜ್ಞಾನ ಪುಸ್ತಕದಲ್ಲಿ ಬರುತಿದ್ದ ಹೈಬ್ರಿಡ್ ಹೇಗೆ ಮಾಡುವುದು ಎಂಬುದನ್ನು ಎರಡು ವಿಧದ ಕೆಂಪು ಮತ್ತು ಬಿಳಿ ಬೆಂಡೆಕಾಯಿ ಯಲ್ಲಿ ಪ್ರಯೋಗಮಾಡುತಿದ್ದೆನು .ನನಗೆ puc ಆದ ನಂತರ bsc ಅಗ್ರಿಕಲ್ಚರ್ ಮಾಡಲು ಆಸಕ್ತಿ ಇತ್ತು ಅದು ಸಾಧ್ಯವಾಗಲಿಲ್ಲ. ಒಟ್ಟಾರೆ ನಾವು ಸಣ್ಣದಿರುವಾಗ ಮನೆಯ ಖರ್ಚು ವೆಚ್ಚ ಗಳು ತರಕಾರಿ ಕೃಷಿ ಇಂದಲೇ ನಡೆಯುತಿತ್ತು .ಬೇಸಿಗೆ ರಜೆ ಯಲ್ಲಿ ಗೇರು ಬೀಜ ತೊಟ್ಟಕ್ಕೆ ಗೇರು ಬೀಜ ಹೆಕ್ಕಲು ದಿನಕ್ಕೆ 40 ರೂಪಾಯೇ ಸಂಬಳಕ್ಕೆ ಸೇರಿದ್ದು ಸಹಿ ನೆನಪ್ಪು .ಅದರಲ್ಲಿ ಸಿಕ್ಕಿದ 2000 ರುಪಾಯೀ ಯನ್ನು ಅಡಿಕೆ ತೋಟಕ್ಕೆ ಪೈಪ್ ಹಾಕಲು ತಂದೆಗೆ ಕೊಟ್ಟದ್ದು ಇನ್ನೂ ನೆನಪಿದೆ .ನಾವು ಸಣ್ಣದಿರುವಾಗ ಎಲ್ಲರೂ ಹಳ್ಳಿಯಲ್ಲಿ ಮಲೆನಾಡು ಗಿಡ್ಡ , ದನಕರು ,ಎಮ್ಮೆ ಗಳನ್ನು ಸಾಕುತ್ತಿದ್ದರು .ಅವುಗಳನ್ನು ಮೇಯಲು ಗುಡ್ಡೆಗೆ ಬಿಡುತ್ತಿದ್ದರು .ರಜಾದಿನಗಳಲ್ಲಿ ದನಕರುಗಳನ್ನು ಮೇಯಿಸಲು ಗುಡ್ಡೆ ಗೆ ಹೋಗುತಿದ್ದೆವು . ಅದರಲ್ಲಿ ಸಿಗುವ ಮಜವೇ ಬೇರೆ .ರಜಾದಿನ ಗಲ್ಲಿ ಗುಡ್ಡೆಯಲ್ಲಿ ಸಿಗುವ ಒಣಗಿದ ಸೆಗಣಿಯನ್ನು ಹೆಕ್ಕಿ ತಂದು ತರಕಾರಿ ಗಿಡ , ಅಡಿಕೆ ಗಿಡಗಳಿಗೆ ಹಾಕುತಿದ್ದೆನು .ಈಗ ಹೈಬ್ರಿಡ್ ದನಗಳು ಬಂದು ಗುಡ್ಡೆಗೆ ದನಕರುಗಳನ್ನು ಬಿಡುವವರೇ ಇಲ್ಲ. ಬೇಸರದ ಸಂಗತಿಯೆಂದರೆ ಭಾರತೀಯ ತಳಿ ದನಗಳು ನಾಶವಾಗುತ್ತಿವೆ .ರಜಾದಿನಗಳಲ್ಲಿ ಗುಡ್ಡೆಗೆ ಊರವರೊಟ್ಟಿಗೆ ದನದ ಹಟ್ಟಿಗೆ ಸೊಪ್ಪು ತರಲು ಹೋಗುತಿದ್ದೆವು ಅದರಲ್ಲಿ ಸಿಗುವ ಮಜವೇ ಬೇರೆ .ಇಂದಿನ ಸಣ್ಣ ಮಕ್ಕಳು ಮತ್ತು ಮುಂದಿನ ಪೀಳಿಗೆಯವರು ತುಳುನಾಡಿನ ಸಂಸ್ಕೃತಿಯನ್ನು ನೋಡುವ ಭಾಗ್ಯ ಅವರಿಗಿಲ್ಲ ಎಂಬುದೇ ಬೇಸರದ ಸಂಗತಿ . ಕೊನೆಯದಾಗಿ ಭಾರತೀಯ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸೋಣ  , ವಿಷರಹಿತ ಕೃಷಿ ಮಾಡೋಣ , ಪ್ರಕೃತಿಯನ್ನು ರಕ್ಷಿಸೋಣ , ಭವ್ಯ ಭಾರತವನ್ನು ಕಟ್ಟೋಣ .

ಕಾಳುಮೆಣಸಿನ ಸಸ್ಯ ಅರೋಗ್ಯ ನಿರ್ವಹಣೆಗೆ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಗೆ - ಕೃಷಿ ವಿಜ್ಞಾನ ಕೇಂದ್ರ ಸಲಹೆ

  ಬರಹ: ಕೂಡಂಡ ರವಿ, ಹೊದ್ದೂರು




ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಇವರು ಕಾಳು ಮೆಣಸಿನ ಸಸ್ಯ ಅರೋಗ್ಯ ನಿರ್ವಹಣೆಗೆ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ ಎಂಬ ಸೂಕ್ಷ್ಮಾಣು ಜೀವಿಗಳÀ ಗೊಬ್ಬರವನ್ನು ಬಳಸಲು ಶಿ¥sóÁರಸ್ಸು ಮಾಡಿರುತ್ತಾರೆ. ಆದ್ದರಿಂದ ಜಿಲ್ಲೆಯ ರೈತರು ಈ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿನಲ್ಲಿ ಬಳಸಿ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕೃಷಿ ವಿಜ್ಞಾನ ಕೇಂದ್ರ ರೈತರಲ್ಲಿ ಮನವಿಯನ್ನು ಮಾಡಿದೆ.  

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಬಳ್ಳೀ ಹಳದಿಯಾಗುವುದನ್ನು ತಪ್ಪಿಸಲು ಮತ್ತು ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆಮಾಡಲು ಸಹಾಯವಾಗುತ್ತದೆ. 

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಗುಣ ವಿಶೇಷತೆಯ ಪ್ರಾಮುಖ್ಯತೆಯನ್ನು ಪಡೆದಿರುತ್ತವೆÉ. ಪ್ರಸ್ತುತ ಸೂಕ್ಷ್ಮಾಣು ಜೀವಿಗಳ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದರಿಂದ, ಜೈವಿಕ ಸಂಪನ್ಮೂಲಗಳ ಮತ್ತು ತಂತ್ರಜ್ಞಾನದ ಕೊರೆತೆಯಿಂದಾಗಿ ಸೂಕ್ಷ್ಮಾಣು ಜೀವಿಗಳ ಬಳಕೆ ಕಡಿಮೆಯಾಗಿರುತ್ತದೆ. ಈ ಕೊರತೆಯನ್ನು ನೀಗಿಸಲು ಮತ್ತು ಒಂದೇ ರೀತಿಯ ಸೂಕ್ಷ್ಮಾಣು ಜೀವಿಗಳ ಬಳಕೆಯಿಂದ ಉಂಟಾಗುವ ಅಧಿಕ ಖರ್ಚು ಮತ್ತು ಕಡಿಮೆ ಕಾರ್ಯ ಕ್ಷಮತೆಯ ನ್ಯೂನತೆಯನ್ನು ಹೋಗಲಾಡಿಸಲು ಭಾರತೀಯ ತೋಟಗಾರಿಕಾ ಸಂಶೋಧನ ಸಂಸ್ಥೆ, ಬೆಂಗಳೂರುರವರು ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಉತ್ಕೃಷ್ಟ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸಿರುತ್ತಾರೆ. 

ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲುವಿನಲ್ಲಿ ಲಭ್ಯವಿದ್ದು ಜಿಲ್ಲೆಯ ರೈತರು ಇದರ ಪ್ರಯೋಜನವನ್ನು ಪಡೆಯಬೇಕಾಗಿ ವಿನಂತಿ.


ಸೂಕ್ಷ್ಮಾಣು ಜೀವಿಗಳ ಸಮೂಹದ ಉಪಯೋಗಗಳು

    • ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ (ಅಜಟೋಬ್ಯಾಕ್ಟರ್ ಟ್ರೋಪಿಕಾಲಸ್, ಬೆಸಿಲ್ಲಸ್ ಆರ್ಯಭಟ ಮತ್ತು ಸುಡೋಮೋನಾಸ್ ಥಾಯ್ವಾನೆನ್ಸಿಸ್) ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ.

    • ಈ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಕಾಳುಮೆಣಸಿಗೆ ಬಳಸುವುದರಿಂದ ಬಳ್ಳಿಗಳು ಹೊಸದಾಗಿ ಚಿಗುರು ಬರಲು, ಶೀಘ್ರ ಸೋರಗು ರೋಗವನ್ನು ಹತೋಟಿ ಮಾಡಲು, ಕೊತ್ತು ಬೀಳುವ ಸಮಸ್ಯೆಯನ್ನು ಕಡಿಮೆ ಮಾಡಲು ಮತ್ತು ಉತ್ತಮವಾಗಿ ಬೇರು ಬರಲು ಸಹಾಯವಾಗುತ್ತದೆ. 

    • ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹದ ಬಳಕೆಯಿಂದ ಸಸ್ಯದ ಬೆಳವಣಿಗೆ,ರೋಗ ನಿಯಂತ್ರಣ ಮತ್ತು ಇಳುವರಿ ಅಧಿಕಗೊಳ್ಳುತ್ತದೆ. 

    • ಸೂಕ್ಷ್ಮಾಣು ಜೀವಿಗಳ ಸಮೂಹವನ್ನು ಬೀಜೋಪಚಾರ, ಕೊಟ್ಟಿಗೆ ಗೊಬ್ಬರ ಮತ್ತು ಬೇವಿನ ಹಿಂಡಿಯ ಜೊತೆ ಮಿಶ್ರಣಮಾಡಿ ರೈತರು ಸುಲಭವಾಗಿ ಬಳಸಬಹುದು. 

    • ಸಾರಜನಕವನ್ನು ಸ್ಥಿರೀಕರಿಸುವ, ರಂಜಕ ಮತ್ತು ಸತುವನ್ನು ಕರಗಿಸುವ ಹಾಗೂ ಸಸ್ಯ ಬೆಳವಣಿಗೆಯನ್ನು ಪ್ರಚೋದಿಸುವ ಸೂಕ್ಷ್ಮಾಣು ಜೀವಿಗಳನ್ನು ಬೇರೆ ಬೇರೆಯಾಗಿ ಹಾಕುವ ಅವಶ್ಯಕತೆಯಿಲ್ಲದೆ ರೈತರು ವಿವಿಧ ಬೆಳೆಗಳಿಗೆ ಬಳಸಬಹುದು.

    •  ಶಿಫಾರಸ್ಸು ಮಾಡಿದ ಸಾರಜನಕ ಮತ್ತು ರಂಜಕಯುಕ್ತ ಗೊಬ್ಬರಗಳಲ್ಲಿ ಶೇ. 25 ರಷ್ಟು ಪ್ರಮಾಣವನ್ನು ಕಡಿಮೆ ಮಾಡುತ್ತದೆ.


ಬಳಸುವ ವಿಧಾನ 

    • ಕೊಟ್ಟಿಗೆ ಗೊಬ್ಬರ ಅಥವಾ ಕಹಿಬೇವಿನ ಹಿಂಡಿಗೆ ಸೇರಿಸುವ ವಿಧಾನ: 5 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 500 ಕೆ.ಜಿ ಕೊಟ್ಟಿಗೆ ಗೊಬ್ಬರ ಅಥವಾ 2 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹವನ್ನು 100 ಕೆ.ಜಿ ಕಹಿಬೇವಿನ ಹಿಂಡಿಯ ಜೊತೆ ಚೆನ್ನಾಗಿ ಮಿಶ್ರಣ ಮಾಡಿ ಕಾಳುಮೆಣಸು ಬೆಳೆಗಳಿಗೆ ಉಪಯೋಗಿಸಬೇಕು. 

    • ಬೆಳೆಗಳಿಗೆ ನೇರವಾಗಿ ಉಪಯೋಗಿಸುವ ವಿಧಾನ: 4 ಕೆ.ಜಿ ಅರ್ಕಾ ಸೂಕ್ಷ್ಮಾಣು ಜೀವಿಗಳ ಸಮೂಹ, ಒಂದು ಕೆ.ಜಿ ಬೆಲ್ಲ, 10 ಲೀಟರ್ ಗಂಜಳ ಮತ್ತು 10 ಕೆ.ಜಿ ಸಗಣಿಯನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ 12 ಗಂಟೆಗಳ ಕಾಲ ಇಟ್ಟು ಕಾಳುಮೆಣಸಿನ ಗಿಡದ ಬುಡ ಭಾಗಕ್ಕೆ ನೇರವಾಗಿ (4 ರಿಂದ 5 ಲೀಟರ್‍ನಷ್ಟು) ಸೆಪ್ಟಂಬರ್-ಅಕ್ಟೋಬರ್ ತಿಂಗಳಿನಲ್ಲಿ ಸುರಿಯಬೇಕು. 


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು

 ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ

ಗೋಣಿಕೊಪ್ಪಲು, ಕೊಡಗು ಜಿಲ್ಲೆ,   ದೂರವಾಣಿ: 08274-295274

Thursday, 27 June 2024

ಬಹು ಉಪಯೋಗಿ ಕರಿಬೇವು

  ಬರಹ: ಕೂಡಂಡ ರವಿ, ಹೊದ್ದೂರು



ಬಹುತೇಕ ಮಹಿಳೆಯರಿಗೆ ಕೇಶವೇ ಸೌಂದರ್ಯವರ್ಧನ ಸಾಧನ. ಚಲನಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿಯೂ ಮಹಿಳೆಯರ ನೀಳಕೇಶಕ್ಕೆ ಆದ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದ ಮಹಿಳೆಯರು ಕೇಶವರ್ಧನೆಗೆ ಹರಸಾಹಸ ಪಡುತ್ತಿದ್ದಾರೆ. ಧನಿಕ ಮಹಿಳೆಯರು ದುಬಾರಿ ಬೆಲೆಯ ಎಣ್ಣೆಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ಸಾಕಷ್ಟು ಪ್ರಮಾಣದ ಮಂದಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಅಂತಹವರು ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಕರಿಬೇವಿನ ಎಣ್ಣೆಯನ್ನು ಬಳಸಿ ನೋಡಬಹುದು. 

ವೈದ್ಯರ ಶಿಫಾರಸ್ಸು

 ಕರಿಬೇವಿನ ಎಲೆಗಳು ಕೂದಲಿನ ಆರೈಕೆಯಲ್ಲಿ ಜನಪ್ರಿಯತೆ ಪಡೆದಿದೆ. ಇದರಲ್ಲಿರುವ ಅಮೈನೋ ಆಮ್ಲಗಳು ಈ ಪ್ರಕ್ರಿಯೆಗೆ ಕಾರಣ. ಕರಿಬೇವಿನ ಪೇಸ್ಟನ್ನು ಮೊಸರಿಗೆ ಮಿಶ್ರಮಾಡಿ ತಲೆಗೂದಲ ಮೇಲೆ ನೇರವಾಗಿ ಹಚ್ಚಬಹುದು. ಅರ್ಧ ಘಂಟೆಯ ಬಳಿಕ ಇದನ್ನು ತೊಳೆಯುವುದರಿಂದ ಕೂದಲು ಪುರ್ನಜೀವ ಗೊಳ್ಳುತ್ತದೆ. ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ತೆಂಗಿನೆಣ್ಣೆಗೆ ಇದರ ಸೊಪ್ಪನ್ನು ಹಾಕಿ ೧೦-೧೫ ನಿಮಿಷ ಚೆನ್ನಾಗಿ ಕುದಿಸಿ. ಆರಲು ಬಿಡಿ. ಈ ಎಣ್ಣೆಯನ್ನು ತಲೆ ಮಸಾಜ್ ಮಾಡಲು, ಕೂದಲಿನ ವರ್ಧನೆಗಾಗಿ ನಿರಂತರವಾಗಿ ಬಳಸಬಹುದು. ಇದರ ಬಳಕೆಯಿಂದ ಕೂದಲು ಗಾಡ ಕಪ್ಪು ಬಣ್ಣಕ್ಕೆ ತಿರುಗುವುದು. ಕೂದಲಿನ ಬೇರುಗಳ ಬಲವರ್ಧನೆಯಾಗುವುದು.  ಕರಿಬೇವಿನ ಎಲೆಗಳಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳು ಸಮೃದ್ಧವಾಗಿವೆ. ಇವು ಮಾನವನ ದೇಹಕ್ಕೆ ಪ್ರತಿರಕ್ಷೆ ನೀಡುತ್ತವೆ ಎಂದು ವೆಂಕಟರಮಣ ಆರ್ಯವೇದ ಆಸ್ಪತ್ರೆಯ ವೈದ್ಯ ಡಾ.ರಾಧಾಕೃಷ್ಣ ಅಭಿಪ್ರಾಯ. 

ಮಾನವನ ಕೂದಲಿಗೆ ನೈಸರ್ಗಿಕ ಬಣ್ಣವನ್ನು ಯಥಾ ರೀತಿಯಲ್ಲಿ ಕಾಪಾಡಲು ಕರಿಬೇವಿನ ಎಲೆಗಳನ್ನು ಬಳಸಬಹುದು. ಇದನ್ನು ನಿರಂತರ-ನಿಯಮಿತವಾಗಿ ಬಳಸಿದಲ್ಲಿ ಕೂದಲ ಬೇರುಗಳ ಬಲವರ್ಧನೆಗೆ ನೆರವಾಗಲಿದೆ. ಇದನ್ನು ನಿರಂತರವಾಗಿ ಬಳಸಿದ್ದಲ್ಲಿ ಕೂದಲಿನ ಉದುರುವಿಕೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಾಣಬರುವುದು. 

ಮಧುಮೇಹದ ವಿರೋಧಿ

ಇದು ಮಧುಮೇಹಿ ವಿರೋಧಿ. ಜೀರ್ಣಕ್ರಿಯೆಗೆ ಸಹಕಾರಿ. ಉದರದಲ್ಲಿನ ಹುಳ ನಿಯಂತ್ರಣ, ದೇಹದಲ್ಲಿನ ಮಿತಿ ಮಿರಿದ ಕೊಬ್ಬು ಶೇಖರಣೆ(ಬೊಜ್ಜು) ತಡೆಗೆ ಸಹಕಾರಿ ಎಂದು ಇತ್ತೀಚಿಗಿನ ಸಂಶೋಧನೆಗಳು ಖಾತ್ರಿಪಡಿಸಿವೆ. ಈ ಸೊಪ್ಪನ್ನು ಬೆಳಿಗ್ಗೆ ಅಗಿದು ತಿಂದಲ್ಲಿ ರಕ್ತದಲ್ಲಿನ ಸಕ್ಕರೆಯ ನಿಯಂತ್ರಣಕ್ಕೆ ನೆರವು ನೀಡುತ್ತದೆ. 

ಮಿತಿಮೀರಿದ ಪಿತ್ತವಿದ್ದಲ್ಲಿ  ಮುಂಜಾನೆ ವೇಳೆಯಲ್ಲಿನ ವಾಕರಿಕೆ, ವಾಂತಿಯ ನಿಯಂತ್ರಣಕ್ಕಾಗಿ ಪುದೀನ, ಕೊತ್ತಂಬರಿ ಮತ್ತು ಕರಿಬೇವಿನ ಎಲೆಗಳನ್ನು ಬಳಸಲಾಗುವುದು. ಈ ಎಲೆಗಳನ್ನು ಅರೆದು ಹಸಿ ಶುಂಠಿ ಮೆಂತೆ, ರುಚಿಗೆ ತಕ್ಕ ಉಪ್ಪನ್ನು ಬಳಸಿ ಎರಡು ದಿನಗಳ ಕಾಲ ಆಹಾರದೊಡನೆ ಸೇವಿಸಬೇಕು.  ಕರಿಬೇವಿನ ಎಲೆಗಳಲ್ಲಿ ಧಾರಾಳ ಕ್ಯಾಲ್ಸಿಯಂ ಅಂಶವಿರುವುದರಿAದ ಹಿರಿಯರ ಮೂಳೆ ಸವೆತದಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿರಿಸಬಹುದು.   ಬೆಂದ ಗಾಯಗಳು, ಮೈಮೇಲೆ ಆದ ಏಟುಗಳಿಗೆ ಕರಿಬೇವಿನ ಎಲೆ, ಅರಶಿನ ಬೆರೆಸಿ, ಪೇಸ್ಟ್ ಮಾಡಿ ಹಚ್ಚಿದಲ್ಲಿ ಶೀಘ್ರ ಗುಣಮುಖರಾಗಬಹುದು. ಕಳೆಗುಂದಿದ ಮುಖದಲ್ಲಿ ತಾಜಾತನ ಮೂಡಿಸಲು, ಮುಖದಲ್ಲಿ ಮೂಡುವ ಮೊಡವೆಗಳ ನಿಯಂತ್ರಣಕ್ಕೆ ಕರಿಬೇವಿನ ಎಲೆ, ಹಸಿ ಅರಸಿನದ ಪೇಸ್ಟ್ನ್ನು ವಾರದ ಕಾಲ ಬಳಸಿ ನಿಯಂತ್ರಿಸಬಹುದು.  

ಬೆಳಸಿ ಬಳಸಿ

ದಾಲ್ಚಿನ್ನಿ ಸಿಪ್ಪೆ, ನಿಂಬೆ ರಸ, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅದನ್ನು ಅರೆದು ಹಚ್ಚಿದಲ್ಲಿ ಕೀಟಗಳ ಕಡಿತದ ನೋವು ಉಪಶಮನವಾಗುವುದು. ಹಸಿವಿನ ಕೊರತೆ, ರುಚಿ ನಷ್ಟದಂತಹ ಸಮಸ್ಯೆಗಳಿಗೆ ಕರಿಬೇವಿನ ಎಲೆಯ ಪುಡಿ, ಜೀರಿಗೆ, ಕಪ್ಪು ಉಪ್ಪನ್ನು ಸೇರಿಸಿ, ಚಿಕಿತ್ಸಕ ಪಾನೀಯ ತಯಾರಿಸಿ ಕುಡಿಯಬೇಕು. ನಿರಂತರವಾಗಿ ಕರಿಬೇವಿನ ಪುಡಿಯನ್ನು ಅಡುಗೆಯಲ್ಲಿ ಬಳಸಿದಲ್ಲಿ ಆರೋಗ್ಯವರ್ಧನೆ ಖಾತರಿ. ಆದರೆ, ರಾಸಾಯನಿಕ, ಕೀಟನಾಶಕ ಮುಕ್ತ  ಸೊಪ್ಪನ್ನು ಬಳಸಿ. ಅನುಕೂಲವಾದಲ್ಲಿ   ಪ್ರತೀ ಮನೆಯಲ್ಲಿಯೂ ಕರಿಬೇವನ್ನು ನೆಟ್ಟು ಬೆಳಸಿ-ಬಳಸಿ ನೋಡಿ. ಅಧಿಕ ಮಾಹಿತಿಗಾಗಿ ಸಮೀಪದ ಆರ್ಯುವೇದಿಕ್ ವೈದ್ಯರನ್ನು ಸಂಪರ್ಕಿಸಬಹುದು. 

Saturday, 22 June 2024

ಗೊತ್ತಾ ನಿಮಗೆ – ಗೊಬ್ಬರದ ಗಿಡ...?



ಬರಹ: ಕೂಡಂಡ ರವಿ, ಹೊದ್ದೂರು,

ಮೊ: ೮೩೧೦೧೩೦೮೮೭.

ಕೃಷಿಕ ಬಂಧುಗಳಿಗೆ ಅತ್ಯಂತ ಪ್ರಿಯವಾದ, ಬಹುಪಯೋಗಿ ಮರವಿದು.

“ಹಸಿರು ಗೊಬ್ಬರದ ಕಾರ್ಖಾನೆ” ಎಂದೇ ಈ ಗಿಡವು ಹೆಸರುವಾಸಿ. ಪುರಾತನ

ಕಾಲದಿಂದಲೇ ನಮ್ಮ ಪೂರ್ವಜರು ಹಸಿರು ಗೊಬ್ಬರವನ್ನು ಬಳಸಿ

ಯಥೇಚ್ಛ ಬೆಳೆ ಬೆಳೆಸುತ್ತಿದ್ದರು. ಇದು ಮಣ್ಣಿನ ಫಲವತ್ತತೆ

ಹೆಚ್ಚಿಸಲು ಸಹಕಾರಿ ಎಂಬುವುದನ್ನು ಅವರು ಅಂದಿನ ಕಾಲದಿಂದಲೇ ಅರಿತಿದ್ದರು.

ಇಂದಿನ ಕಾಲದಲ್ಲಿ ಹಸಿರು ಗೊಬ್ಬರವನ್ನು ಈ ಮರವನ್ನು ಬೆಳೆಸುವುದರಿಂದ

ಅತ್ಯAತ ಸುಲಭವಾಗಿ ಬಳಸಲು ಸಾಧ್ಯ. ಈ ಮರದ ಸೊಪ್ಪು

ವೈವಿಧ್ಯಮಯ ಬೆಳೆಗಳಿಗೆ ಬೇಕಾಗುವ ವಿವಿಧ ಪೋಷಕಾಂಶಗಳನ್ನು

, ಲಘು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಗಿಡದಿಂದ ಕಡಿಮೆ

ಖರ್ಚಿನಿಂದ ವಿವಿಧ ಬಗೆಯ ಬೆಳೆಗಳಿಗೆ ಎಲ್ಲಾ ರೀತಿಯ

ಪೋಷಕಾಂಶಗಳನ್ನು ಒದಗಿಸಬಹುದು.

ಗ್ಲಿರಿಸೀಡಿಯಾ ಎಂದು ಕರೆಯಲಾಗುವ ಈ ಗಿಡವು ಹಳ್ಳಿಗರ ಬಾಯಲ್ಲಿ

ಗೊಬ್ಬರದ ಗಿಡವೆಂಬ ಖ್ಯಾತಿಯನ್ನು ಪಡೆದಿದೆ. ದಕ್ಷಿಣಕನ್ನಡದಲ್ಲಿ ಇದನ್ನು

ಹೀಟ್ ಗಿಡ ಎಂದು ಕರೆಯುವುದುಂಟು. ಇದರ ಎಳೆಯ ಕಾಂಡಗಳು,

ಸೊಪ್ಪು ಅತ್ಯಂತ ಅಲ್ಪಾವಾಧಿಯಲ್ಲಿ ಕೊಳೆತು ಗೊಬ್ಬರವಾಗುತ್ತದೆ.

ಇದರ ಸೊಪ್ಪನ್ನು ಸೊಪ್ಪಿನ ಕಷಾಯ ತಯಾರಿಸಿ, ಸಸ್ಯಾ¯ಯ(ನರ್ಸರಿ),

ಹೂವಿನ ಮತ್ತು ತರಕಾರಿ ಗಿಡಗಳಿಗೆ ಬಳಸಲು ಸಹಾ ಉಪಯೋಗಿಸಬಹುದು.

ಇದು ಅತ್ಯಂತ ವೇಗವಾಗಿ ಬೆಳೆಯುತ್ತದೆ. ಈ ಮರವು ವಾತಾವರಣದಲ್ಲಿನ

ಸಾರಜನಕವನ್ನು ಹೀರುತ್ತದೆ.

ಇತರ ಸಾವಯವ ಗೊಬ್ಬರದ ಜೊತೆಗೆ ಇದರ ಸೊಪ್ಪನ್ನು ಬೆರೆಸಿ,

ಬಳಸಬಹುದು. ಅಥವಾ ನೇರವಾಗಿ ತೋಟ, ಗದ್ದೆ, ಹೊಲಗಳಿಗೆ ಇದರ

ಸೊಪ್ಪನ್ನು ನೇರವಾಗಿ ಹಾಕಬಹುದು. ಇದರ ಸೊಪ್ಪನ್ನು ನೆಲದಲ್ಲಿ ಹರಡಿದ

ಬಳಿಕ ಒಂದಿಷ್ಟು ತೇವಾಂಶ ಸಿಕ್ಕಿದ್ದಲ್ಲಿ ಅತ್ಯಂತ ವೇಗವಾಗಿ ಇದು

ಕೊಳೆಯುತ್ತದೆ.

ಉಪಯೋಗಗಳು

ಗ್ಲಿರಿಸಿಡಿಯಾ ಎಂಬುದು ಪ್ರೋಟೀನ್-ಸಮೃದ್ಧ ಮೇವು ಮತ್ತು ಹೆಚ್ಚಿನ

ಪೌಷ್ಟಿಕಾಂಶದ ಮೌಲ್ಯದಿಂದಾಗಿ ಪ್ರಮುಖ ಉಷ್ಣವಲಯದ ಮೇವಿನ

ಮರಗಳಲ್ಲಿ ಒಂದು. ಕತ್ತರಿಸಿದ ದಂಟು ಮತ್ತು ಎಲೆಗಳಿಂದ ರಾಸುಗಳಿಗೆ

ಮೇವು ತಯಾರಿಸಲು ಸಹ ಸಾಧ್ಯವಿದೆ, ಇದನ್ನು ಹುಲ್ಲು ಅಥವಾ ಮೆಕ್ಕೆ

ಜೋಳದೊಂದಿಗೆ ಬೆರೆಸಬಹುದು.


ಗ್ಲಿರಿಸಿಡಿಯಾದ ಸಣ್ಣ ಭಾಗಗಳನ್ನು ಇತರ ಮೇವುಗಳೊಂದಿಗೆ ಮಿಶ್ರಣ

ಮಾಡಿ ಮತ್ತು ಉಪ್ಪು ಮತ್ತು ಬೆಲ್ಲವನ್ನು ಸೇರಿಸಿ ಕೊಡಲು

ಪ್ರಯತ್ನಿಸಬಹುದು. ಇದನ್ನು ಜಾನುವಾರು, ಕುರಿ ಮತ್ತು ಮೇಕೆಗಳಿಗೆ

ಕತ್ತರಿಸಿ ಮೇವುಗಳ ಜೊತೆ ಮಿಶ್ರಣ ಮಾಡಿ ಬಳಸಬಹುದು..

ಹವಾಗುಣವನ್ನು ಅವಲಂಬಿಸಿ ಪ್ರತಿ ೨ ರಿಂದ ೪ ತಿಂಗಳುಗಳಲ್ಲಿ ಎಲೆಗಳನ್ನು

ಕತ್ತರಿಸಿ ಬಳಸಬಹುದು.

ರಾಸಾಯನಿಕ ಗೊಬ್ಬರಕ್ಕೆ ಬದಲಿ

ಈ ಮರಗಳನ್ನು ಭಾಗದಲ್ಲಿ ಅಂತರ್ ಬೆಳೆಗೆ ಬಳಸಲಾಗುತ್ತದೆ ಏಕೆಂದರೆ

ಅವು ಮಣ್ಣಿನಲ್ಲಿ ಸಾರಜನಕವನ್ನು ಸರಿಪಡಿಸಿ ಕಡಿಮೆ ಮಣ್ಣಿನ

ಫಲವತ್ತತೆಯನ್ನು ಸಹಿಸಿಕೊಳ್ಳುತ್ತವೆ, ಆದ್ದರಿಂದ ಅವು

ಬೆಳೆಗಳೊಂದಿಗೆ ಅಂತರ್ಗತವಾಗಿರುತ್ತದೆ ರಾಸಾಯನಿಕ

ರಸಗೊಬ್ಬರಗಳ ಅಗತ್ಯವಿಲ್ಲದೆ ಬೆಳೆ ಇಳುವರಿಯನ್ನು ಗಣನೀಯವಾಗಿ

ಹೆಚ್ಚಿಸಬಹುದು.ಮಣ್ಣಿನ ಮೇಲ್ಮೈನ ಸವೆತವನ್ನು ತಡೆಗಟ್ಟಲು ಇದನ್ನು

ಬೆಳೆಸಲಾಗುತ್ತದೆ. ಕೃಷಿಯನ್ನು ರಕ್ಷಿಸಲು ಸಾಂಪ್ರದಾಯಿಕ “ ಜೀವಂತ

ಬೇಲಿ (ಲೈವ್ ಫೆನ್ಸಿಂಗ್)“ಗಾಗಿ ಬಳಸಲಾಗುವ ಅತ್ಯುತ್ತಮ ಸಸ್ಯಗಳಲ್ಲಿ ಇದೂ

ಒಂದು.

ಈ ಗಿಡವನ್ನು ಬೀಜ ಮತ್ತು ಕಾಂಡಗಳಿAದ ಬೆಳೆಸಬಹುದು. ಬೇಲಿಗೆ ತಂತಿ

ಕAಬವಾಗಿ, ಬೇಲಿಯಂಚು, ತೋಟಗಳಲ್ಲಿ ನೆರಳಿನ ಮರವಾಗಿ ಬೆಳೆಸಬಹುದು.

ಇದರ ಸೊಪ್ಪುಗಳನ್ನು ಗದ್ದೆಗಳಿಗೆ, ಸಸಿಮಡಿಗಳಿಗೆ ಬಳಸಿದ್ದಲ್ಲಿ

ಬೆಳೆಗಳು ಸೊಂಪಾಗಿ ಬೆಳೆಯುತ್ತವೆ. ಇದರ ಬಳಕೆಯಿಂದ ಮಣ್ಣಿನಲ್ಲಿ

ಸಾವಯವ ಇಂಗಾಲವು ಹೆಚ್ಚಾಗುತ್ತದೆ. ಪರಿಣಾಮ ಮಣ್ಣು ಅಧಿಕ

ಪ್ರಮಾಣದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾರ್ಮಥ್ಯ ಪಡೆಯುತ್ತದೆ.

ಇದರ ಮಹತ್ವ ಅರಿತ ಕೃಷಿಕ ಸಮುದಾಯದವರು ಅಧಿಕ ಪ್ರಮಾಣದಲ್ಲಿ

ಇದನ್ನು ಬೆಳೆಯುತ್ತಿರುವರು. ಈ ಗಿಡದ ಬಗ್ಗೆ ಅಧಿಕ ಮಾಹಿತಿಗಾಗಿ

ಸಮೀಪದ ತೋಟಗಾರಿಕಾ ಅಥವಾ ಕೃಷಿ ಇಲಾಖಾ ಕಛೇರಿ, ಗೋಣಿಕೊಪ್ಪದ ಕೃಷಿ

ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಬಹುದು.